ಪಾರ್ಟ್ ಟೈಮ್ ಜಾಬ್ ವಂಚನೆ, ಹಣ ಕಳೆದುಕೊಂಡ ಯುವಕ, ಉದ್ಯೋಗಾಕಾಂಕ್ಷಿಗಳೇ ಎಚ್ಚರ !
ಸರಕಾರ್ ನ್ಯೂಸ್ ವಿಜಯಪುರ
ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡಿದರೆ ಡಬ್ಬಲ್ ಕಮೀಷನ್ ಕೊಡುತ್ತೇನೆಂದು ನಂಬಿಸಿ ಸಾವಿರಾರು ರೂಪಾಯಿ ಯಾಮಾರಿಸಿದ ಪ್ರಕರಣ ಬೆಳಕಿಗೆ ಬೆಂದಿದೆ.
ವಿಜಯಪುರದ ಕಾಳಿಕಾನಗರದ ನಿವಾಸಿ ಆನಂದ ಸಿದ್ದಣ್ಣ ಹುಲ್ಲೂರ ಮೋಸಕ್ಕೆ ಬಲಿಯಾಗಿದ್ದು, ಬರೋಬ್ಬರಿ 42 ಸಾವಿರ ರೂಪಾಯಿ ಪಂಗನಾಮ ಹಾಕಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹಂತ ಹಂತವಾಗಿ ಹಣ ಹಾಕಿದ ಆನಂದ ಇದೀಗ ಮೋಸ ಹೋಗಿದ್ದು ಅರಿವಾಗುತ್ತಿದ್ದಂತೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ಮೂಲತಃ ಹೊನ್ನಳ್ಳಿ ಗ್ರಾಮದ ಆನಂದ ವಿಜಯಪುರದ ಅಥಣಿ ರಸ್ತೆಯಲ್ಲಿರುವ ವೇದಾಂತ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೆ. 23ರಂದು ಮಧ್ಯಾಹ್ನ 2.49ರ ಸುಮಾರಿಗೆ ಮನೆಯಲ್ಲಿ ಪತ್ನಿಯ ಜೊತೆಗೆ ಮೊಬೈಲ್‌ನಲ್ಲಿ ಜಾಬ್ ಸರ್ಚ್ ಮಾಡುತ್ತಿದ್ದಾಗ ಒಂದು ಅನಾಮಧೇಯ ಲಿಂಕ್ ಬಂದಿದೆ. ಅದನ್ನು ಕ್ಲಿಕ್ ಮಾಡಿದಾಗ ವಾಟ್ಸಾಪ್‌ಗೆ ಮೆಸೇಜ್ ಬಂದಿದ್ದು ಅದರಲ್ಲಿ “ನಾನು ಅಮೇಜಾನ್ ಅಸಿಸ್ಟಂಟ್ ಇದ್ದು ನಿಮಗೆ ಮನೆಯಲ್ಲಿ ಕುಳಿತು ಹಣ ಗಳಿಸಲು ಸಹಾಯ ಮಾಡುತ್ತೇನೆ” ಎಂದಿತ್ತು. ಅಲ್ಲದೇ ಅದೇ ನಂಬರ್‌ನಿಂದ ವಾಟ್ಸ್‌ಪ್ ಕಾಲ್ ಮಾಡಿ ನಾವು ಕಳಿಸಿದ ಲಿಂಕ್ ಕ್ಲಿಕ್ ಮಾಡಿರಿ ಅಲ್ಲಿರುವ ವಸ್ತುಗಳನ್ನು ಗ್ರ್ಯಾಬ್ ಮಾಡಿದರೆ ಆ ವಸ್ತುವಿನ ಬೆಲೆ ಡಬಲ್ ಕಮೀಷನ್ ಕೊಡುವುದಾಗಿ ತಿಳಿಸಿದಾಗ ಆನಂದ ಹೇಳಿದಂತೆ ಮಾಡಿದ್ದಾನೆ.
ಡಿಪಾಸಿಟ್ ಹೆಸರಲ್ಲಿ ಲೂಟಿ:
ಆನಂದ ಅನಮಾಧೇಯ ಲಿಂಕ್ ಕ್ಲಿಕ್ ಮಾಡಿದಾಗ ಅಮೇಜಾನ್ ಸೈಟ್ ಓಪನ್ ಆಗಿದ್ದು, ಅಲ್ಲಿ ವಸ್ತುಗಳು ಇದ್ದು ಅವುಗಳನ್ನು ಕ್ಲಿಕ್ ಮಾಡಿದಾಗ ಸೇವ್ ಅಂತಾ ಬಂದಿದೆ. ನಂತರ ಅದರ ಬೆಲೆಯಷ್ಟು ಹಣ ಡಿಪಾಜಿಟ್ ಮಾಡಬೇಕೆಂದು ಕ್ಯೂ ಆರ್ ಕೋಡ್ ಕಳಿಸಿದ್ದು ಅದಕ್ಕೆ ಹಂತ ಹಂತವಾಗಿ ಹಣ ವರ್ಗಾಯಿಸುತ್ತಾ ಬಂದಿದ್ದು ಹೀಗೆ ಒಟ್ಟು 42,000 ರೂಪಾಯಿ ಕಳೆದುಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಮ್ ಠಾಣೆ ಅಧಿಕಾರಿ ರಮೇಶ ಅವಜಿ ಹಾಗೂ ಸಿಬ್ಬಂದಿ ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)