ನಮ್ಮ ವಿಜಯಪುರ

ಸಹ ಶಿಕ್ಷಕಿಯ 5 ತೊಲೆ ಚಿನ್ನ ದೋಚಿ ಪರಾರಿ, ಸರಗಳ್ಳರ ಹಾವಳಿಗೆ ಬೆಚ್ಚಿದ ಜನ !

ಸರಕಾರ್‌ ನ್ಯೂಸ್‌ ಸಿಂದಗಿ

ಹೆರಿಗೆ ಹಿನ್ನೆಲೆ ಮಗು ಕಾಣಲೆಂದು ಹೊರಟಿದ್ದ ಸಹ ಶಿಕ್ಷಕಿಯ ಕೊರಳಲ್ಲಿದ್ದ 4 ತೊಲೆಯ ತಾಳಿ ಚೈನ್‌ ಹಾಗೂ 1 ತೊಲೆಯ ಕರಿಮಣಿ, ಬಂಗಾರದ ಗುಂಡು ಹಾಗೂ ಬಂಗಾರದ ತಾಳಿ ಸಮೇತ ಕೊರಳ ಆಭರಣಗಳನ್ನು ದೋಚಿ ಪರಾರಿಯಾದ ಘಟನೆ ಸಿಂದಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಸಿಂದಗಿಯ ವಿದ್ಯಾನಗರದ ನಿವಾಸಿ ಗೀತಾ ಬಸವರಾಜ ಬಡಿಗೇರ (40) ಎಂಬುವವರ ಸರಗಳ್ಳತನ ನಡೆದಿದೆ. ಡಿ. 8ರಂದು ಈ ಬಗ್ಗೆ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೃತ್ತಿಯಲ್ಲಿ ಸಹ ಶಿಕ್ಷಕಿಯಾಗಿರುವ ಗೀತಾ ಚಿನ್ನದ ಆಭರಣ ಧರಿಸಿಕೊಂಡು ತನ್ನ ಪರಿಚಯದವರಾದ ಸುನಂದಾ ಅಭೋಜಿ ಭಜಂತ್ರಿ ಇವರ ಮಗಳಾದ ಮೇಘನಾ ಇವರ ಹೆರಿಗೆ ಆದ ಹಿನ್ನೆಲೆ ಮಗು ನೋಡಲೆಂದು ಹೊರಟಾಗ ವಿದ್ಯಾನಗರದ ಕ್ರಾಸ್‌ ಬಳಿ ಬೈಕ್‌ ಮೇಲೆ ಬಂದ ಇಬ್ಬರು ಕೊರಳಲ್ಲಿದ್ದ ಚಿನ್ನದ ಹಿಡಿದು ಜಗ್ಗಿ ಹರಿದು ದೋಚಿಕೊಂಡು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!