ನಮ್ಮ ವಿಜಯಪುರ

ಟೋಲ್‌ಗೇಟ್‌ನಲ್ಲಿ ಕಳ್ಳನ ಹಿಡಿಯಲು ಕಾರ್ಯಾಚರಣೆ, ಮಾಸ್ಕ್‌ ಧರಿಸಿ ಚಾಕು ಹಿಡಿದು ಬಂದ ಕಳ್ಳ, ನಾಲ್ಕು ಕಿಮೀ ಓಡಿ ಪರಾರಿ…..ಇದೊಂದು ರೋಚಕ ಘಟನೆ

ಸರಕಾರ್‌ ನ್ಯೂಸ್‌ ವಿಜಯಪುರ

ಇಳಕಲ್ಲನಿಂದ  ಕಾರ್‌ನಲ್ಲಿ ತಪ್ಪಿಸಿಕೊಂಡು ಬಂದಿದ್ದ ಕಳ್ಳನನ್ನು ಹಿಡಿಯುವ ಕಾರ್ಯಾಚರಣೆ ರೋಚಕತೆ ಸೃಷ್ಠಿಸಿದೆ.

ವಿಜಯಪುರ ಕಸಬಾ ಬಳಿ ಭಾನುವಾರ ಬೆಳಗ್ಗೆ ಕಳ್ಳನ ಹಿಡಿಯುವ ಕಾರ್ಯಾಚರಣೆ ಮೈ ನವಿರೇಳಿಸುವಂತೆ ಮಾಡಿದೆ. ಈ ರೋಮಾಂಚನಕಾರಿ ಕಾರ್ಯಾಚರಣೆಯಲ್ಲಿ ಕಳ್ಳ ಮಾತ್ರ ಪರಾರಿಯಾಗಿದ್ದು, ಕಾರ್‌ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾನೆ. ಕಾರ್‌ನಲ್ಲಿ ಚಾಕು, ಕತ್ತರಿ ಮತ್ತಿತರ ಸಾಮಗ್ರಿ ಸಿಕ್ಕಿದ್ದು ಬೆಲೆ ಬಾಳುವ ಆಭರಣ ಇರುವ ಶಂಕೆ ವ್ಯಕ್ತವಾಗಿದೆ.

ಏನಿದು ಪ್ರಕರಣ?

ಇಲಕಲ್‌ನಿಂದ ಕಾರ್‌ನಲ್ಲಿ ಪರಾರಿಯಾಗಿದ್ದ ಕಳ್ಳನನ್ನು ಸೆರೆ ಹಿಡಿಯಲು ಇಳಕಲ್‌ ಪೊಲೀಸರು ಕಸಬಾ ಟೋಲ್‌ಗೇಟ್‌ ಸಿಬ್ಬಂದಿಗೆ ಸಂದೇಶ ರವಾನಿಸಿದ್ದರು. ಅದರಂತೆ ಬೆಳಗ್ಗೆ ಸ್ಯಾಂಟ್ರೋ ಕಾರ್‌ ನಲ್ಲಿ ಬಂದ ಕಳ್ಳನನ್ನು ಹಿಡಿಯಲು ಟೋಲ್‌ಗೇಟ್‌ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು.

ಟೋಲ್‌‌ಗೇಟ್  ಬಳಿ ಕಾರ್ ನ್ನ ತಡೆದ ಟೋಲ್ ಗೇಟ್ ಸಿಬ್ಬಂದಿಗೆ ಹೆದರಿಸಲು ಮುಂದಾದ ಕಳ್ಳ ಕಾರ್‌ನಿಂದ ಚಾಕು ಸಮೇತ ಇಳಿದು ಬಂದಿದ್ದಾನೆ. ಮುಖಕ್ಕೆ ಮಾಸ್ಕ್‌ ಹಾಕಿದ್ದು, ಚಾಕು ಹಿಡಿದು ಬಂದ ಕಳ್ಳನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಕಳ್ಳ ಕಾಲ್ಕಿತ್ತಿದ್ದಾನೆ. ಬಳಿಕ ಆತನನ್ನು ಬೆನ್ನಟ್ಟಲಾಗಿ ನಾಲ್ಕು ಕಿಮೀ ಓಡಿ ಪರಾರಿಯಾಗಿದ್ದಾನೆ.  ಕಾರ್‌ ಕೂಡ ಕಳ್ಳತನದ್ದಾಗಿದ್ದು,ಅದರಲ್ಲಿದ್ದ ಬ್ಯಾಗ್‌ ಇಳಕಲ್ಲ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆಂದು ಟೋಲ್‌ ಗೇಟ್‌ ಸಿಬ್ಬಂದಿ ತಿಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!