ಮಕ್ಕಳ ಸಹಾಯವಾಣಿಯಿಂದ ಕಾರ್ಯಾಚರಣೆ, ಏಳು ಬಾಲಕಾರ್ಮಿಕರ ರಕ್ಷಣೆ
ಸರಕಾರ್ ನ್ಯೂಸ್ ವಿಜಯಪುರ
ಬಾಲ ಕಾರ್ಮಿಕ ಪದ್ಧತಿ ಅನಿಷ್ಠವಾಗಿದ್ದು ಕಾನೂನು ಪ್ರಕಾರ ನಿಷೇಧವಿದ್ದರೂ ಅಲ್ಲಲ್ಲಿ ಇನ್ನೂ ಪದ್ಧತಿ ಜಾರಿಯಲ್ಲಿರುವುದು ಕಾರ್ಯಾಚರಣೆ ವೇಳೆ ಕಂಡು ಬಂದಿದೆ.
ಶನಿವಾರ ಮಕ್ಕಳ ರಕ್ಷಣಾ ಕಾರ್ಯಾಚರಣೆಗಿಳಿದ ‘ಮಕ್ಕಳ ಸಹಾಯವಾಣಿ-1098’ ತಂಡ ಏಳು ಬಾಲಕಾರ್ಮಿಕರನ್ನು ರಕ್ಷಿಸಿದೆ.
ವಿಜಯಪುರದ ಮಹಾತ್ಮ ಗಾಂಧಿ ವೃತ್ತ, ಬಿಎಲ್‌ಡಿಇ ರಸ್ತೆ ಹಾಗೂ ಕೆಸಿ ಮಾರುಕಟ್ಟೆಗಳಲ್ಲಿ ಬಾಲಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಡೆದಿದೆ. 7 ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತಲ್ಲದೇ 4 ಮಕ್ಕಳನ್ನು ಮಾಲೀಕರು ಹಾಗೂ ಪಾಲಕರಿಗೆ ತಿಳಿಹೇಳಿ ಮನೆಗೆ ಕಳುಹಿಸಲಾಗಿದೆ.
ಈ ಕಾರ್ಯಾಚರಣೆಯೊಂದಿಗೆ ನಗರದ ಹೋಟೆಲ್ ಹಾಗೂ ಅಂಗಡಿಗಳ ಮಾಲೀಕರಿಗೆ ಅನಿಷ್ಠ ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಮಕ್ಕಳ ಸಹಾಯವಾಣಿ ಯೋಜನಾ ನೀರ್ದೆಶಕಿ ಸುನಂದಾ ತೋಳಬಂದಿ, ಸಂಯೋಜಕರಾದ ಕೇಶವ ಟಿ, ಶಶಿಕಲಾ ಜಾಬೇನವರ, ಬಸ್ ಸ್ಟಾಂಡ್ ಹಾಗೂ ಕೋಲ್ಯಾಬ್ ಚೈಲ್ಡಲೈನ್ ಸಿಬ್ಬಂದಿ, ಸಂತೋಷ ಚಾಂದಕವಟೆ ಹಾಗೂ ಪೋಲಿಸ್ ಸಿಬ್ಬಂದಿ ಆರ್.ಕೆ ಗವ್ಹಾರ್, ಪಿ.ಬಿ ಗಾಣಿಗೇರ, ಪಿ.ಬಿ ರಾಠೋಡ, ರಮೇಶ ಕೋಟಿ ಮತ್ತಿತರರಿದ್ದರು.