ನಮ್ಮ ವಿಜಯಪುರ

ಝಗಮಗಿಸುತ್ತಿದೆ ಆಲಮಟ್ಟಿ ಜಲಾಶಯ, ಸಿಎಂ ಬಾಗಿನ ಅರ್ಪಣೆಗೆ ಎಲ್ ಬಿಎಸ್ ಅಣೆಕಟ್ಟೆ ಸಜ್ಜು !

ವಿಜಯಪುರ: ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು, ಬಾಗಿನ ಅರ್ಪಣೆಗೆ ನಾಳೆ ಸಿಎಂ ಸಿದ್ದರಾಮಯ್ಯ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಆಗಮಿಸುತ್ತಿದ್ದಾರೆ. ತನ್ನಿಮಿತ್ತ ಜಲಾಶಯದ ವ್ಯಾಪ್ತಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಜಲಾಶಯದ ಗೇಟ್ ಗಳಲ್ಲಿ ಲೈಟಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಮನಮೋಹಕವಾಗಿ ಕಂಗೊಳಿಸುತ್ತಿದೆ. ಕಾರಂಜಿಗಳು ಚಿಮ್ಮುತ್ತಿವೆ. ಜಲಾಶಯಕ್ಕೆ ಲೈಟಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಮನಮೋಹಕವಾಗಿ ಕಾಣುತ್ತಿದೆ. ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಲು ಪೂರ್ವ ತಯಾರಿ ನಡೆಸಿದೆ. ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿದೆ. ಮುಡಾ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ಬಾಗಿನ ಅರ್ಪಣೆಗೆ ಆಗಮಿಸುತ್ತಿರುವುದು ಕೃಷ್ಣಾತೀರದಲ್ಲಿ‌ ಕುತೂಹಲ ಸೃಷ್ಠಿಸಿದೆ. ಸಂಕಷ್ಟದಲ್ಲಿರುವ ಸಿಎಂ ಜನರ ಸಂಕಷ್ಟಕ್ಕೆ ಧ್ವನಿಯಾಗುವರೇ ಎಂದು ಕೃಷ್ಣೆ ಕುಡಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಅಂದಹಾಗೆ ಆ. 21 ರಂದು ಮಧ್ಯಾಹ್ಮ 12.30 ಕ್ಕೆ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದು, ಸಚಿವರಾದ ಡಿ.ಕೆ.ಶಿವಕುಮಾರ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರಾದಿಯಾಗಿ ಅವಳಿ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.

error: Content is protected !!