ನಮ್ಮ ವಿಜಯಪುರ

ಮೊಸರು ನಾಡಿನಲ್ಲಿ ಚಿರತೆ ಪ್ರತ್ಯಕ್ಷ, ಸಾರ್ವಜನಿಕರಲ್ಲಿ ಆತಂಕ

ವಿಜಯಪುರ: ಮೊಸರು ನಾಡು ಖ್ಯಾತಿಯ ಕೊಲ್ಹಾರದ ಕೃಷ್ಣಾ ನದಿ ತೀರದಲ್ಲಿ ಚಿರತೆ ಹಾಗೂ ಚಿರತೆ ಮರಿಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ !ಕೊಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ ಬಳಿ ಜಮೀನೊಂದರಲ್ಲಿ ರಾತ್ರಿ ಚಿರತೆ ಹಾಗೂ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಗ್ರಾಮದ ರೈತ ಸುರೇಶ ಕುಬಕಡ್ಡಿ ಹಾಗೂ ಮಹಾದೇವ ಕೋಲಕಾರ ಎಂಬುವವರು ಜಮೀನಿನ ಸುತ್ತ ಸಿಸಿಟಿವಿ ಅಳವಡಿಸಿದ್ದು, ಅದರಲ್ಲಿ ಚಿರತೆಯ ಚಲನವಲನಗಳು ಸೆರೆಯಾಗಿವೆ‌. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು, ತಹಸೀಲ್ದಾರ್ ಹಾಗೂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರವಾಗಿ ಚಿರತೆ ಹಾಗೂ ಮರಿಗಳನ್ನು ಸೆರೆ ಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ‌‌. ಅಲ್ಲದೇ ಜನರು ಸುರಕ್ಷತೆಯಿಂದ ಓಡಾಡಬೇಕೆಂದು ಅರಣ್ಯಾಧಿಕಾರಿ ಬಸವರಾಜ ಕೊಣ್ಣೂರ, ಕೊಲ್ಹಾರ ತಹಸೀಲ್ದಾರ್ ಎಸ್ ಎಸ್.ನಾಯಕಲಮಠ ಸೂಚನೆ ಜನರಲ್ಲಿ ಮನವಿ ಮಾಡಿದ್ದಾರೆ.

error: Content is protected !!