ಗುಮ್ಮಟ ನಗರಿಯಲ್ಲಿ ಜೋಡಿ ಕೊಲೆ, ಕಾರಣ ತಿಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ !!!
ಸರಕಾರ ನ್ಯೂಸ್ ವಿಜಯಪುರ
ಅತ್ತೆ ಹಾಗೂ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುಮ್ಮಟ ನಗರಿ ಯಲ್ಲಿ ನಡೆದಿದೆ.
ಇಲ್ಲಿನ ನವಬಾಗ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ರೂಪಾ ಮೇತ್ರಿ (32)
ಕಲ್ಲವ್ವ (55) ಕೊಲೆಯಾದವರು. ರೂಪಾಳ ಪತಿ ಮಲ್ಲಿಕಾರ್ಜುನ ಮೇತ್ರಿ ಆರೋಪಿ.
ನವಭಾಗ್ ಪ್ರದೇಶದ ಭಾಗವಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಬಾಡಿಗೆಯಿದ್ದ ಮಲ್ಲಿಕಾರ್ಜುನ
ಮೂವರು ಮಕ್ಕಳು ಪತ್ನಿ ಹಾಗೂ ಅತ್ತೆಯೊಂದಿಗೆ ಬಾಡಿಗೆ ಮನೆಯಲ್ಲಿದ್ದ.
ಮಲ್ಲಿಕಾರ್ಜುನ ಕಳೆದ ಆರು ತಿಂಗಳುಗಳಿಂದ ನವಭಾಗ್ ಪ್ರದೇಶದಲ್ಲಿ ವಾಸವಿದ್ದನು. ಪತ್ನಿ
ರೂಪಾ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲವಂತೆ. ಮನೆಯಲ್ಲಿ ಕೆಲಸ ಮಾಡುತ್ತಿರಲಿಲ್ಲವಂತೆ.
ಮಹಿಳಾ ಹಾಗೂ ವಿವಿಧ ಸಂಘಟನೆಗಳ ಕೆಲಸದ ಕಾರಣ ಸದಾ ಮನೆಯಾಚೆ ಇರುತ್ತಿದ್ದ ಕಾರಣ
ಇದರಿಂದ ರೋಸಿ ಹೋಗಿದ್ದ ಮಲ್ಲಿಕಾರ್ಜುನ ಮಲಗಿದ್ದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಪತ್ನಿ ಹಾಗೂ ಅತ್ತೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೇ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.