ಧೂಳಖೇಡ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ, ಯಾವಾಗ? ಹೇಗೆ?
ಸರಕಾರ ನ್ಯೂಸ್ ವಿಜಯಪುರ
ಚೆಕ್ ಪೋಸ್ಟ್ ಎಂದಾಕ್ಷಣ ಭ್ರಷ್ಟಾಚಾರದ ಮಾತು ವ್ಯಾಪಕವಾಗಿ ಕೇಳಿ ಬರುತ್ತಲೇ ಇರುತ್ತವೆ.
ಹೀಗಾಗಿ ಚೆಕ್ ಪೋಸ್ಟ್ ಗಳ ಕಾರ್ಯವೈಖರಿ ಮೇಲೆ ತನಿಖಾ ಸಂಸ್ಥೆಗಳು ಹದ್ದಿನ ಕಣ್ಣಿರಿಸುತ್ತವಲ್ಲದೇ ಆಗಾಗ ದಾಳಿ ಕೂಡ ನಡೆಸುತ್ತವೆ.
ಅಂತೆಯೇ, ಧೂಳಖೇಡ ಚೆಕ್ ಪೋಸ್ಟ್ ಮೇಲೆ ಮಂಗಳವಾರ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಚಡಚಣ ತಾಲೂಕಿನ ಧೂಳಖೇಡ್ ಬಳಿ ಇರುವ ಆರ್ ಟಿ ಓ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ ಪಿ ಮಲ್ಲೇಶ ನೇತೃತ್ವದಲ್ಲಿ ದಾಳಿ ನಡೆದಿದೆ.
ದಾಖಲಾತಿಗಳ ಪರಿಶೀಲನೆ ನಡೆದಿದ್ದು, ಬಳಿಕ ಹೆಚ್ಚಿನ ಮಾಹಿತಿ ನಿಡುವುದಾಗಿ ಎಸ್ ಪಿ ಮಲ್ಲೇಶ ಮಾಹಿತಿ ನೀಡಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)