ರಾಜ್ಯ

ವಕ್ಫ್ ಆಸ್ತಿ ಯತ್ನಾಳ ಅಪ್ಪಂದಲ್ಲ ! ಸಚಿವ ಜಮೀರ್‌ಅಹ್ಮದ್ ಖಡಕ್ ಭಾಷಣ

ವಿಜಯಪುರ: ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್‌ಅಹ್ಮದ ಖಾನ್, ವಕ್ಫ್ ಆಸ್ತಿ ಯತ್ನಾಳ ಅಪ್ಪಂದೂ ಅಲ್ಲ-ನಮ್ಮಪ್ಪಂದೂ ಅಲ್ಲ ಎಂದಿದ್ದಾರೆ !
ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ನಡೆದ ವಕ್ಫ್ ಆಸ್ತಿಗೆ ಸಂಬಂಧಿಸಿದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ಸರ್ಕಾರದ ಜಾಗ ಅಲ್ಲ. ದಾನಿಗಳು ದಾನ ಮಾಡಿದ ಜಾಗ. ಯತ್ನಾಳ ಅಪ್ಪಂದೂ ಅಲ್ಲ; ನನ್ನಪ್ಪಂದೂ ಅಲ್ಲ. ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನ ಕೊಟ್ಟಿರೋದು ಎಂದರು. ವಕ್ಫ್ ಆಸ್ತಿ ಮೇಲೆ ಸರ್ಕಾರದ ಹಕ್ಕೂ ಸಹ ಇಲ್ಲ. ರಾಜ್ಯದಲ್ಲಿ 1.12 ಲಕ್ಷಕ್ಕೂ ಅಧಿಕ ವಕ್ಫ್ ಆಸ್ತಿ ಇದೆ. ಅದರಲ್ಲಿ ಒಂದಿಂಚೂ ಜಾಗ ಸರ್ಕಾರ ತಗೊಂಡಿಲ್ಲ. ಬದಲಾಗಿ ಸರ್ಕಾರವೇ ವಕ್ಫ್ ಆಸ್ತಿ ತೆಗೆದುಕೊಂಡಿದೆ. ಖಬರಸ್ಥಾನ ಬಿಟ್ಟು ಒಂದಿಂಚೂ ಜಾಗ ಸಹ ಸರ್ಕಾರ ತೆಗೆದುಕೊಂಡಿಲ್ಲ ಮಿಸ್ಟರ್ ಯತ್ನಾಳ ಎಂದರು.

error: Content is protected !!