ರಾಜ್ಯ

ಕರ್ನಾಟಕದಲ್ಲಿ ಹೆಚ್ಚಿದೆ ಕಳ್ಳಭಟ್ಟಿ ದಂಧೆ, ಕಳೆದ ಐದು ವರ್ಷದಲ್ಲಿ ದಾಖಲಾದ ಪ್ರಕರಣ ಎಷ್ಟು ಗೊತ್ತಾ?

ಸರಕಾರ್‌ ನ್ಯೂಸ್‌ ಬೆಂಗಳೂರ

ಸರಕಾರ ಚಾಪೆ ಕೆಳಗೆ ನುಸುಳಿದರೆ ಅಕ್ರಮ ದಂಧೆಕೋರರು ರಂಗೋಲಿ ಕೆಳಗೆ ನುಸುಳುತ್ತಾರೆ ಏಂಬುದಕ್ಕೆ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಕಂಡು ಬಂದ ಅಕ್ರಮ ಸಾರಾಯಿ ಮಾರಾಟ ಹಾಗೂ ಕಳ್ಳಭಟ್ಟಿ ದಂಧೆಯೇ ಸಾಕ್ಷಿ !

ಹೌದು, ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಮಾರಾಟ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಸಿಎಲ್‌-2 ಹಾಗೂ ಸಿಎಲ್‌-11 (ಸಿ) ಸನ್ನದುಗಳ ವಿರುದ್ದ ಸಾಕಷ್ಟು ಪ್ರಕರಣ ದಾಖಲಿಸಲಾಗಿದೆ.

2017-18ರಲ್ಲಿ 4319, 2018-19ರಲ್ಲಿ 2522 ಪ್ರಕರಣ, 2019-20ರಲ್ಲಿ 2210 ಪ್ರಕರಣಗಳು, 2020-21ನೇ ಸಾಲಿನಲ್ಲಿ 2130 ಹಾಗೂ 2021-22ನೇ ಸಾಲಿನಲ್ಲಿ 2246 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಉತ್ತರ ಕರ್ನಾಟಕದ ಗಡಿಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಜೋರಾಗಿದ್ದು, ವ್ಯಾಪಕ ದಾಳಿ ನಡೆದಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 4231 ಪ್ರಕರಣಗಳನ್ನು ದಾಖಲಿಸಿ 1391 ಕಳ್ಳಭಟ್ಟಿ ದಂಧೆಕೋರರನ್ನು ದಸ್ತಗಿರಿಗೊಳಿಸಲಾಗಿದೆ. ಹೀಗೆ ದಾಖಲಾದ ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸುತ್ತಾರೆ.

ಆದರೆ, ಅಧಿಕಾರಿಗಳ ದಾಳಿಯ ಹೊರತಾಗಿಯೂ ಸಾಕಷ್ಟು ಅಕ್ರಮ ದಂಧೆಗಳು ನಡೆಯುತ್ತಿದ್ದು, ಆಗೊಂದು ಈಗೊಂದು ನಡೆಯುವ ದಾಳಿಗೆ ದಂಧೆಕೋರರು ಜಗ್ಗುತ್ತಿಲ್ಲ. ಹೀಗಾಗಿ ಸರ್ಕಾರದ ರಾಜಸ್ವಕ್ಕೆ ಧಕ್ಕೆಯಾಗುತ್ತಿದೆ. ಅಬಕಾರಿ ಅಧಿಕಾರಿಗಳು ಇನ್ನಷ್ಟು ಜಾಗರೂಕರಾಗಿ ಚುರುಕಿನ ಕಾರ್ಯಾಚರಣೆ ನಡೆಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಿದೆ.

(ನೈಜ, ನಿಖರ, ನಿರಂತರ ಸುದ್ದಿಗಳಿಗಾಗಿ ಬಲಬದಿಯ ಬೆಲ್‌ ಬಟನ್‌ ಒತ್ತುವ ಮೂಲಕ ಸರ್ಕಾರ ನ್ಯೂಸ್‌ ಸಬ್‌ಸ್ಕ್ರೈಬ್‌ ಮಾಡಿ)

error: Content is protected !!