ನಮ್ಮ ವಿಜಯಪುರ

ಓವೈಸಿಗೆ ಶಾಸಕ ಯತ್ನಾಳ ತಿರುಗೇಟು, ಇಸ್ಲಾಮಿಕ್‌ ರಾಷ್ಟ್ರ ಎಂದಿಗೂ ಅಸಾಧ್ಯ !

ಸರಕಾರ್‌ ನ್ಯೂಸ್‌ ವಿಜಯಪುರ

ಪಾಕಿಸ್ತಾನದ ವಿಚಾರವಾಗಿ ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ ಓವೈಸಿಗೆ ಹಿಂದುತ್ವದ ಪ್ರಬಲ ಪ್ರತಿಪಾದಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿರುಗೇಟು ನೀಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಪಾಕಿಸ್ತಾನದ ಮೇಲೆ ಎಲ್ಲಿಲ್ಲದ ಪ್ರೀತಿ. ನಾವು ಕನಸಿನಲ್ಲಿಯೂ ಪಾಕಿಸ್ತಾನದ ಹೆಸರು ತೆಗೆಯುವುದಿಲ್ಲ. ಆದರೆ, ಯತ್ನಾಳ ಪದೇ ಪದೇ ಪಾಕಿಸ್ತಾನದ ಹೆಸರು ತೆಗೆಯುತ್ತಾರೆ. ಬಹುಶಃ ಅವರಿಗೆ ಪ್ರಧಾನಿ ಮೋದಿ ಹೇಳಿಕೊಟ್ಟಿರಬಹುದೆಂದು ಮಂಗಳವಾರ ವಿಜಯಪುರದಲ್ಲಿ ಒವೈಸಿ ಟಾಂಗ್‌ ನೀಡಿದ್ದರು. ಅಲ್ಲದೇ ಭಾರತದಲ್ಲಿ ಗಡ್ಡ, ಟೋಪಿಗೆ ಆತಂಕ ಇದೆ ಎಂದಿದ್ದರು.

https://www.youtube.com/watch?v=iVC-Sj3wQW4&feature=share&si=ELPmzJkDCLju2KnD5oyZMQ

ಇದೀಗ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ, ಭಾರತದಲ್ಲಿ ದೇಶದ್ರೋಹಿಗಳಿಗೆ ತೊಂದರೆ ಇದೆ. ಭಾರತದಲ್ಲಿ ದೇಶದ ಪರವಾಗಿ ಇರುವವರಿಗೆ ಗೌರವ ಇದೆ. ಆದರೆ, ಭಾರತದ ಅನ್ನ ತಿಂದು ಪಾಕಿಸ್ತಾನದ ಪರವಾಗಿ ಮಾತನಾಡುವವರಿಗೆ ಬಿಜೆಪಿಯ ವಿರೋಧ ಇದೆ ಎಂದರು.

ಹಿಜಾಬ್ ಹಾಕಿಕೊಂಡವರು ದೇಶದ ಪ್ರಧಾನಿ ಆಗುವ ಓವೈಸಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಎಷ್ಟೋ ‌ಮಂದಿ ದೇಶದಲ್ಲಿ ಕನಸು ಕಾಣುತ್ತಿದ್ದಾರೆ. 2047ಕ್ಕೆ ಇಡೀ ದೇಶವೇ ಇಸ್ಲಾಮಿಕ್ ರಾಷ್ಟ್ರ ಮಾಡುವುದು ಯಾವ ಕಾಲಕ್ಕೂ ಆಗಲ್ಲ.‌ ಪಾಕಿಸ್ತಾನ, ಅಫ್ಘಾನಿಸ್ತಾನ ಅಖಂಡ ಭಾರತದಲ್ಲಿ ಸೇರಬೇಕು. ಅದಕ್ಕಾಗಿ ಪಾಕಿಸ್ತಾನ ಮೇಲೆ ಪ್ರೀತಿ ಇದೆ ಎಂದರು.

ಇನ್ನು ಓವೈಸಿ ಹಾಗೇ ಪ್ರಧಾನಿ ಮೋದಿ ಅಲ್ಲ.ಒವೈಸಿ ದುಷ್ಟ ವ್ಯಕ್ತಿ. ಓವೈಸಿ ಭಾರತದ ಅನ್ನ, ನೀರು ಉಂಡು ಸುಖ ಅನುಭವಿಸುತ್ತಾರೆ. ರಾಮ ಮಂದಿರ ನಾಶ ಮಾಡುತ್ತೇನೆ ಎಂದಿದ್ದಾನೆ ಎಂದು ವಾಗ್ದಾಳಿ ನಡೆಸಿದರಲ್ಲದೇ, ಭವಿಷ್ಯದಲ್ಲಿ ಹಿಂದುತ್ವವೇ ಇಡೀ ಜಗತ್ತನೇ ಆಳುತ್ತದೆ ಎಂದರು.

error: Content is protected !!