ಕಂಟ್ರಿ ಪಿಸ್ತೂಲ್ ಇಟ್ಟುಕೊಂಡಿದ್ದವರ ಮೇಲೆ ಪ್ರಕರಣ ದಾಖಲು, ಯಾರು ಈ ಆರೋಪಿಗಳು?
ಸರಕಾರ್ ನ್ಯೂಸ್ ವಿಜಯಪುರ
ಅನಧಿಕೃತವಾಗಿ ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡು ಹೊಂದಿದ್ದ ಇಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲುಕ್ಯ ನಗರದ ನಿವಾಸಿ ಜಿತೇಶ ವಿಮಲಚಂದ ನಾಹರ (27) ಹಾಗೂ ಕಾಶಿಮಕೇರಿ ತಾಂಡಾ ನಿವಾಸಿ ಗೋವಿಂದ ನಾಮದೇವ ರಾಠೋಡ (35) ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಸತೀಶ ದನರಾಜ ನಾಯಕ ಎಂಬಾತ ಇಬ್ಬರಿಗೂ ಕಂಟ್ರಿ ಪಿಸ್ತೂಲ್ ಹಾಗೂ 2 ಜೀವಂತ ಗುಂಡು ತಮ್ಮ ಹತ್ತಿರ ಅನಧಿಕೃತವಾಗಿ ಇರಿಸಿಕೊಳ್ಳಲು ಕೊಟ್ಟಿದ್ದನೆಂದು ತಿಳಿದು ಬಂದಿದೆ. ಜಿತೇಶ ಬಳಿ ಸ್ಟೀಲ್ ನಮೂನೆಯ ಕಂಟ್ರಿ ಪಿಸ್ತೂಲ್ ಹಾಗೂ ಗೋವಿಂದನ ಬಳಿ 2 ಜೀವಂತ ಗುಂಡು ಇದ್ದು ವಶಕ್ಕೆ ಪಡೆಯಲಾಗಿದೆ.
ಆರೋಪಿತರ ಮೇಲೆ ಕಲಂ; 25 (1) (ಎ) ಭಾರತೀಯ ಆಯುಧ ಕಾಯ್ದೆ 1959ರ ಪ್ರಕಾರ ದೂರು ದಾಖಲಿಸಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)