ರಾಜ್ಯ

ಹಾವು ಕಡಿತಕ್ಕೆ ಕೋಳಿ ಮೊಟ್ಟೆಯಲ್ಲಿದೆ ಔಷಧ, ಕರ್ನಾಟಕದಲ್ಲಿ ನಡೆಯುತ್ತಿದೆ ಮಹತ್ವದ ಸಂಶೋಧನೆ

ಸರಕಾರ್‌ ನ್ಯೂಸ್‌ ಬೆಂಗಳೂರ

ಹಾವು ಕಡಿತಕ್ಕೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಅನೇಕ ಸಾವು ನೋವುಗಳು ಉಂಟಾಗುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಔಷಧ ಸಂಗ್ರಹಿಸಿಟ್ಟುಕೊಳ್ಳಬೇಕೆಂಬ ನಿಯಮವಿದ್ದಾಗ್ಯೂ ಸಕಾಲಕ್ಕೆ ಪೂರೈಕೆಯಾಗದಿರುವುದು ಕಂಡು ಬರುತ್ತಲೇ ಇದೆ. ಹೀಗಾಗಿ ಸಾವಿನ ಪ್ರಮಾಣ ತಗ್ಗಿಸಲು ಸರ್ಕಾರ ಹೊಸದೊಂದು ಸಂಶೋಧನೆ ಕೈಗೊಂಡಿದೆ.

ಏನಿದು ಸಂಶೋಧನೆ?

ಹಾವು ಕಡಿತಕ್ಕೆ ಕೋಳಿ ಮೊಟ್ಟೆಯಿಂದ ಪ್ರತಿ ವಿಷವನ್ನು ಉತ್ಪಾದಿಸುವಲ್ಲಿ ಕರ್ನಾಟಕದ ವಿಜ್ಞಾನಿಗಳು ಸಫಲಗೊಂಡಿದ್ದಾರೆ. ಐವರು ವಿಜ್ಞಾನಿಗಳ ತಂಡ ಈ ಸಂಶೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆಯ ಪ್ರತಿ ವಿಷವನ್ನು ಪ್ರಯೋಗಾಲಯದಲ್ಲಿ ಪ್ರಾಣಿಗಳಲ್ಲಿ ಪ್ರಯೋಗಿಸಲಾಗುತ್ತಿದೆ. ಅದರ ಫಲಿತಾಂಶಗಳನ್ನು ಸಂಯೋಜಿಸಲಾಗುತ್ತಿದೆ. ಈ ಸಂಶೋಧನೆಯನ್ನು ಪೈಲಟ್‌ ಮಾದರಿಯಲ್ಲಿ ಯಶಸ್ವಿಗೊಳಿಸಲಾಗುತ್ತಿದೆ.

ರಾಜ್ಯದಲ್ಲಿ 2014-15ರಲ್ಲಿ ಪಶು ಮತ್ತು ಮೀನುಗಾರಿಕೆ ವಿಶ್ವ ವಿದ್ಯಾಲಯಕ್ಕೆ ಹಾವು ಕಡಿತಕ್ಕೆ ಔಷಧ ಸಂಶೋಧನೆಗಾಗಿ 50 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿದೆ. ಈ ಸಂಶೋಧನೆಯೂ 2022-23ನೇ ಸಾಲಿನಲ್ಲಿ ಮುಕ್ತಾಯಗೊಳ್ಳಲಿದೆ. ಇದು ಬಳಕೆಗೆ ಲಭ್ಯವಾಗಲು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ತಿಳಿಸಿದ್ದಾರೆ.

error: Content is protected !!