ನಮ್ಮ ವಿಜಯಪುರ

ಬಣಜಿಗರ ಆಕ್ರೋಶ, ರೆಡ್ಡಿ ಮುನಿಸಿಗೆ ಯತ್ನಾಳ ಪ್ರತಿಕ್ರಿಯೆ ಏನು?

ಸರಕಾರ್ ನ್ಯೂಸ ವಿಜಯಪುರ

ಬಣಜಿಗ ಸಮಾಜದ ಮೇರುನಾಯಕ ಔಟ್ ಆದರೂ ಆಶ್ಚರ್ಯವಿಲ್ಲ !

ಹೀಗಂತ ಸಮಾಜದ ಹೆಸರು ಉಲ್ಲೇಖಿಸದೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ ನೀಡಿದರು.

ಮಂಗಳವಾರ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣದ ಬಳಿಕ ತಮ್ಮ ವಿರುದ್ದ ನಡೆಯುತ್ತಿರುವ ಬಣಜಿಗ ಸಮಾಜದ ಹೋರಾಟಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಾಸಕ ಯತ್ನಾಳ, ಕೆಲವು ಜನರು ಉದ್ದೇಶಪೂರ್ವಕವಾಗಿ ಪ್ರತಿಭಟನೆ ಮಾಡುತ್ತಾರೆ. ಹೀಗೆಲ್ಲಾ ಮಾಡಿಕೊಂಡು ಹೋದರೆ ಅವರ ಜನಪ್ರತಿನಿಧಿಗಳು ಕಡಿಮೆಯಾಗುತ್ತಾರೆ. ಅದನ್ನು ಗಂಭೀರವಾಗಿ ತಿಳಿದುಕೊಳ್ಳಬೇಕು ಎಂದರು.

ಹೀಗೆಲ್ಲಾ ಮಾಡಿಕೊಂಡು ಹೋದರೆ ಇರೋ ಜನಪ್ರತಿನಿಧಿಗಳು ಕಡಿಮೆ ಆಗುತ್ತಾರೆ. ಮುಂದೆ ಅವರ ಮಹಾನ್ ಮೇರುನಾಯಕನೂ ಔಟ್ ಆದರೆ ಆಶ್ಚರ್ಯವಿಲ್ಲ ಎಂದು ಯತ್ನಾಳ ಟಾಂಗ್ ನೀಡಿದರು.

ರೆಡ್ಡಿ ಮುನಿಸು:
ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಮೇಲೆ ಮುನಿಸಿಕೊಂಡಿರುವ ವಿಚಾರಕ್ಕೆ ಸಂಬಂಧೀಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ, ಜನಾರ್ದನ ರೆಡ್ಡಿ ಅವರಿಗೆ ನೋವಿದೆ. ಪಕ್ಷದ ಹಿರಿಯರು ಸರಿಪಡಿಸುತ್ತಾರೆ. ಒಂದು ಕಾಲದಲ್ಲಿ ರೆಡ್ಡಿ ಅವರಿಂದ ಬಿಜೆಪಿಗೆ ಅನುಕೂಲಮಾಡಿಕೊಂಡು ಸಿಎಂ ಆಗಿದ್ದಾರೆ. ಯಾರು ರೆಡ್ಡಿ ಅವರ ಅನಕೂಲದಿಂದ ಸಿಎಂ ಆಗಿದ್ದರೋ ಅವರು ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗಬೇಕಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಯತ್ನಾಳ ಗುಡುಗಿದರು.

error: Content is protected !!