ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಾಗ್ದಾಳಿ, ಗುಂಡಾ ಕೇಸ್ ದಾಖಲಿಸಲು ಯತ್ನಾಳ ಪೊಲೀಸ್ ಅಧಿಕಾರಿಯಾ? ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದ್ದೇನು?
ಸರ್ಕಾರ್ ನ್ಯೂಸ್ ವಿಜಯಪುರ
ತಾಜ್‌ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಮಹಾಮಂಡಲ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಆಗಲೇ ಗುಂಡಾ ಕಾಯ್ದೆ ಅಡಿ ಕೇಸ್ ದಾಖಲಿಸುತ್ತೇವೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಏನು ಪೊಲೀಸ್ ಅಧಿಕಾರಿಯಾ? ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಾಗ್ದಾಳಿ ನಡೆಸಿದರು.
ಮಹಾಮಂಡಲದ ಸಭೆಯಲ್ಲಿ ಗಣೇಶೋತ್ಸವವನ್ನು ಸಂಪ್ರದಾಯದಂತೆ ತಾಜ್ಬಾವಡಿಯಲ್ಲಿಯೇ ವಿಸರ್ಜನೆ ಮಾಡಬೇಕೆಂಬ ಒತ್ತಾಯ ಕೇಳಿ ಬಂತು. ಆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪರವಾನಿಗೆ ಕೇಳಿದ್ದೆವು. ಅಷ್ಟರಲ್ಲಿ ಗುಂಡಾ ಕಾಯ್ದೆ ಅಡಿ ಕೇಸ್ ದಾಖಲಿಸುತ್ತೇನೆ ಎಂದು ಶಾಸಕ ಯತ್ ಬೇಕು ಅವರನ್ನೇ ಅಧಿಕೃತವಾಗಿ ಪರಿಗಣಿಸಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಕಿಡಿಕಾರಿದರು.
ತಾಜ್‌ಬಾವಡಿಯಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕೆಂಬ ಹಠ ಇಲ್ಲ. ಸಾರ್ವಜನಿಕರು ಧಾರ್ಮಿಕ ಕಾರ್ಯಕ್ರಮಗಳಿಗೆ ತಾಜ್ ಬಾವಡಿಯಲ್ಲಿ ಅವಕಾಶ ಕಲ್ಪಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ವರ್ಷಕ್ಕೆ ಒಮ್ಮೆಯಾದರೂ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದ್ದೇವಷ್ಟೆ. ಮನವಿಗೆ ಇನ್ನೂ ಮನವಿ ಮಾಡಿಲ್ಲ. ಆಗಲೇ ನಗರ ಶಾಸಕರು ಕೇಸ್ ಹಾಕುತ್ತೇನೆ, ಗುಂಡಾ ಕಾಯ್ದೆ ಅಡಿ ಕೇಸ್ ದಾಖಲಿಸುತ್ತೇನೆ ಎನ್ನುತ್ತಿದ್ದಾರೆ. ನಮಗೇನು ಶಾಂತಿಭಂಗ ಮಾಡಬೇಕೆಂಬ ಉದ್ದೇಶ ಇಲ್ಲ. ರಾಜಕೀಯ ಲಾಭ ಪಡೆಯುವ ಉದ್ದೇಶವೂ ಇಲ್ಲ. ಗಾಬರಿಯಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಜ್ಬಾವಡಿ ನೀರು ಎಲ್ಲಿಯೂ ಪೂರೈಸಲಾಗುತ್ತಿಲ್ಲ. ಅಲ್ಲಿ ಶುದ್ಧೀಕರಣ ಯಂತ್ರವೂ ಹಾಳಾಗಿದೆ. ಅದಾದರೂ ರಿಪೇರಿ ಮಾಡಲಿ. ಇದೆ ಶಾಸಕರು ಅದರ ನಿರ್ವಹಣೆ ಮಾಡಬಹುದಿತ್ತಲ್ಲ. ಇಷ್ಟು ದಿನ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.
ಗಜಾನನ ಮಹಾಮಂಡಲ ಅಧ್ಯಕ್ಷ ಶ್ರೀಕಾಂತ ಶಿಂಧೆ ಕಾರ್ಯಕ್ರಮದ ರೂಪುರೇಷೆ. ಮಾಜಿ ಅಧ್ಯಕ್ಷ ಮಹೇಶ ಜಾಧವ, ಪ್ರಭಾಕರ ಬೋಸಲೆ, ಗೋಪಾಲ ಘಟಕಾಂಬಳೆ, ವಿಜಯ ಜೋಷಿ, ಸಿದ್ದು ಮಲ್ಲಿಕಾರ್ಜುನ ಮಠಾಧ್ಯಕ್ಷರು ಇದ್ದರು.