ವಿಜಯಪುರ

ವಿಧಾನ ಸಭೆಯಿಂದ ವಿಧಾನ ಪರಿಷತ್ ಚುನಾವಣೆ, ಸುಣಗಾರಗೆ ಅವಕಾಶ ಕೊಡದಿದ್ದರೆ ಪಕ್ಷಕ್ಕೆ ಹಿನ್ನೆಡೆ, ಅಕ್ಷಯಕುಮಾರ ಎಚ್ಚರಿಕೆ !

ದೇವರಹಿಪ್ಪರಗಿ: ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುಮಾವಣೆಯಲ್ಲಿ ಹಿಂದುಳಿದ ಸಮಾಜದ ಪ್ರಬಲ ನಾಯಕ ಶರಣಪ್ಪ ಸುಣಗಾರಗೆ ಅವಕಾಶ ನೀಡದಿದ್ದರೆ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ತಾಲ್ಲೂಕು ಸೇವಾದಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಕ್ಷಯಕುಮಾರ ಹೇಳಿದರು.

ರಾಜ್ಯ ಕಾಂಗ್ರೆಸ್ ನಾಯಕರು ಕೊಟ್ಟಮಾತಿನಂತೆ ನಡೆದುಕೊಂಡು ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಿರುವ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು‌ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಸಭೆಯಿಂದ ವಿಧಾನ ಪರಿಷತ್ತ ಚುನಾವಣೆಗೆ ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕರಾದ ಶರಣಪ್ಪ ಸುಣಗಾರ ರವರಿಗೆ ಟಿಕೇಟ್ ನೀಡಿ ಹಿಂದುಳಿದ ವರ್ಗಗಳಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು.
ಕಳೆದ ಸಿಂದಗಿ ಉಪ ಚುನಾವಣೆಯಲ್ಲಿ ರಾಜ್ಯದ ಘಟಾನುಗಟಿ ಕಾಂಗ್ರೆಸ್ ನಾಯಕರದ ಮಾಜಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ರಾಜ್ಯಧ್ಯಕ್ಷರಾದ ಡಿ ಕೆ ಶಿವಕುಮಾರ್ ಎಂ ಬಿ ಪಾಟೀಲ ಸಾಹೇಬರು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ನಾಯಕರು ಬಹಿರಂಗವಾಗಿಯೇ ಆಶ್ವಾಸನೆ ನೀಡಿದ್ದಾರೆ. ಆ ಆಶ್ವಾಸನೆಯಂತೆ ಸದ್ಯ ನಡೆದುಕೊಂಡು ಕಾಂಗ್ರೆಸ್ ಪಕ್ಷ ಯಾವತ್ತು ಕೊಟ್ಟ ಮಾತಿಗೆ ತಪ್ಪಲ್ಲ ನುಡಿದಂತೆ ನಡೆದುಕೊಳ್ಳುತ್ತದೆ ಎಂಬುದು ನಿರುಪಿಸಬೇಕಾಗಿದೆ.

ಮತ್ತು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಿಸಿ ನಂತರ ಜಿಲ್ಲಾ ಅಧ್ಯಕ್ಷರಾಗಿ ಸತತ 12 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಪಕ್ಷ ನೀಡಿದ ಕೆಲಸವನ್ನು ನಿಷ್ಠೆಯಿಂದ ಮಾಡಿ ರಾಜ್ಯದಲ್ಲೆ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಹಣ ಹಾಕಿ ಕೆಪಿಸಿಸಿ ಕಛೇರಿ ಕಟ್ಟಿದ ಹೆಗ್ಗಳಿಕೆ ಮಾಜಿ ಶಾಸಕರಿಗೆ ಸಲ್ಲುತ್ತದೆ. 2013 ರಲ್ಲಿ ಜಿಲ್ಲೆಯ 8 ವಿಧಾನ ಸಭೆ ಮತಕ್ಷೇತ್ರಗಳಲ್ಲಿ 7 ರಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಶ್ರಮ ವಹಿಸಿ ಪಕ್ಷ ಕಟ್ಟಿದ್ದು ಇವರ ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಇಂತಹ ಹಿಂದುಳಿದ ವರ್ಗಗಳ ನಾಯಕ ಮತ್ತು ಪ್ರಬಲ ತಳವಾರ ಸಮಾಜದ ಹಿರಿಯ ಮುಖಂಡರಾದ ಶರಣಪ್ಪ ಸುಣಗಾರ ಇವರಿಗೆ ಈ ಭಾರಿ ವಿಧಾನ ಪರಿಷತ್ತಿಗೆ ಟಿಕೆಟ್ ನೀಡಿ ಮೇಲ್ಮನೆ ಸದಸ್ಯರನ್ನಾಗಿ ಮಾಡಿದರೆ ಉತ್ತರ ಕರ್ನಾಟಕದ ಹಿಂದುಳಿದ ವರ್ಗದ ನಾಯಕನನ್ನು ರಾಜಕೀಯವಾಗಿ ಮೆಲ್ಲೆತ್ತುವ ಕೆಲಸವಾಗೂತ್ತೆ ಇದರೊಂದಿಗೆ ಉತ್ತರ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಯಾಗಿ ಮುಂದಿನ 2023 ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಸಾಧಿಸುವುದು ನಿಶ್ಚಿತ. ಒಂದು ವೇಳೆ ಟಿಕೆಟ್ ನೀಡದೆ ನಿರ್ಲಕ್ಷ್ಯಸಿದರೆ ತೋರಿದರೆ ಅಷ್ಟೇ ಹಿನ್ನಡೆ ಆಗುವುದು ಕಟ್ಟಿಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

error: Content is protected !!