ವಿಜಯಪುರ

ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಪ್ರಕರಣ, ಇಂದು ವರದಿ ಸಲ್ಲಿಕೆ ಸಾಧ್ಯತೆ, ಡಿಸಿ ದಾನಮ್ಮನವರ ಹೇಳಿದ್ದೇನು?

ವಿಜಯಪುರ: ಕಾಯಕಲ್ಪ ಪ್ರಶಸ್ತಿ ಕಂಡ ವಿಜಯಪುರ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದಲ್ಲಿ ನಡೆದ ಬಾಣಂತಿಯರ ನರಳಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾಡಳಿತಕ್ಕೆ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸಿ ಬಲರಾಮ ಲಮಾಣಿ ನೇತೃತ್ವದ ತಂಡ ಬಾಣಂತಿಯರ ನರಳಾಟದ ತನಿಖೆ ಮಾಡುತ್ತಿದ್ದು, ವರದಿ ನೀಡಲು ಕಾಲಾವಕಾಶ ಕೇಳಿದ್ದಾರೆ ಎಂದರು. ಅದಕ್ಕಾಗಿ ಬಾಣಂತಿಯರ ನರಳಾಟ ವರದಿ ಇಂದು ಶುಕ್ರವಾರ ಬರುವ ಸಾಧ್ಯತೆ ಇದೆ ಎಂದರು.

ಅಲ್ಲದೇ, 21 ಬಾಣಂತಿಯರಲ್ಲಿ ಓರ್ವ ರೋಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದಂತೆ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 100 ಬೆಡ್ ಇರುವ ಆಸ್ಪತ್ರೆ ಆಗಿದೆ. ಜಿಲ್ಲೆ ಸೇರಿದಂತೆ ಪಕ್ಕದ ರಾಜ್ಯದಿಂದಲ್ಲೂ ರೋಗಿಗಳು ಆಗಮಿಸುತ್ತಾರೆ‌. ಅದಕ್ಕಾಗಿ ಕೆಲಸದ ಒತ್ತಡದಿಂದ ಈ ಘಟನೆ ಆಗಿದೆ ಎಂದರು. ದಿನಂಪ್ರತಿ 10 ರಿಂದ 15 ಸಿಜೇರಿಯನ್ ಆಗುತ್ತಿವೆ. ಈ ವೇಳೆಯಲ್ಲಿ ವರ್ಕ್ ಲೋಡ್ ಜಾಸ್ತಿ ಆಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಈ ತರಹ ಆಗದಂತೆ ವೈದ್ಯರಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದರು.

error: Content is protected !!