ಅರಬ್ಬಿ ಸಮುದ್ರದಲ್ಲಿ ಚಂಡಮಾರುತ, ಮಸೂತಿಯಲ್ಲಿ ಸಿಡಿಲಿನಾರ್ಭಟ, 14 ಕುರಿಗಳು ಬಲಿ…!
ವಿಜಯಪುರ: ಅರಬ್ಬಿ ಸಮುದ್ರದಲ್ಲಿ ಚಂಡ್ರಮಾರುತ ಬೀಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ ಎಂಬ ಹವಾಮಾನ ಇಲಾಖೆ ಮಾಹಿತಿ ನಿಜವಾಗಿದೆ.
ಎಚ್ಚರಿಕೆ ಸಂದೇಶ ನೀಡಿದ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಮಸೂತಿ ಗ್ರಾಮದ ಹೊರಭಾಗದಲ್ಲಿ ಸಿಡಿಲು ಬಡಿದು 14 ಕುರಿಗಳು ಸಾವಿಗೀಡಾಗಿವೆ.
ಮಂಗಳವಾರ ಕುರಿ ಮೇಯಿಸುವಾಗ ಸಿಡಿಲು ಬಡಿದಿದ್ದು ದೊಂಡಿಬಾ ಸಂಡಗೆ ಎಂಬುವವರಿಗೆ ಸೇರಿದ ಕುರಿಗಳು ಅಸುನೀಗಿವೆ. ಮೂಲತಃ ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದ ದೊಂಡಿಬಾ ಕುರಿಗಳನ್ನು ಮೇಯಿಸಲು ಮಸೂತಿ ಗ್ರಾಮದ ಬಳಿ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಕುರಿಗಾಹಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.