ಬಿಸಿಲೂರಿನಲ್ಲಿ ವರುಣನಾರ್ಭಟ, ಸಿಡಿಲಿಗೆ ಮೂಕ ಪ್ರಾಣಿಗಳ ಬಲಿ, ಶಿರಗೂರನಲ್ಲಿ ಆಕಳು ಸಾವು
ವಿಜಯಪುರ: ಬಿಸಿಲೂರಿನಲ್ಲಿ ವರುಣನಾರ್ಭಟ ಜೋರಾಗಿದ್ದು, ಸಿಡಿಲಿನ ಹೊಡೆತಕ್ಕೆ ಮೂಕ ಪ್ರಾಣಿಗಳು ಅಸುನೀಗುತ್ತಿವೆ.
ಮಂಗಳವಾರ ಮಸೂತಿಯಲ್ಲಿ 14 ಕುರಿಗಳು ಸಾವಿಗೀಡಾದ ಬೆನ್ನಲ್ಲೇ ಇಂಡಿ ತಾಲೂಕಿನ ಶಿರಗೂರ ಇನಾಂ ಗ್ರಾಮದಲ್ಲಿ ಆಕಳೊಂದು ಬಲಿಯಾಗಿದೆ.
ಯಲ್ಲಪ್ಪ ಮಾಳಪ್ಪ ಪೂಜಾರಿ ಇವರ ಸರ್ವೆ ನಂ. 105 ರಲ್ಲಿ ಸಿಡಿಲು ಬಡಿದು ಒಂದು ಆಕಳು ಸತ್ತಿದೆ. ಒಂದು ಕಚ್ಚಾ ಮನೆಯ ಪತ್ರಾಸ್ ಹಾರಿ ಹೋಗಿ ಹಾನಿಯಾಗಿದೆ. ಸಂಬಂಧಿಸಿದ ರೈತನಿಗೆ ನೆರವು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.