ಪಾರ್ಟ್ ಟೈಮ್ ಜಾಬ್ ನಂಬಿ ಮೋಸ ಹೋದ ಸಾಫ್ಟ್‌ವೇರ್ ಇಂಜಿನಿಯರ್, 30ಲಕ್ಷಕ್ಕೂ ಅಧಿಕ ಹಣ ವಂಚನೆ, ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ
ಸರಕಾರ ನ್ಯೂಸ್ ವಿಜಯಪುರ
ಪಾರ್ಟ್ ಟೈಮ್ ಜಾಬ್ ಆಮಿಷಕ್ಕೆ ಒಳಗಾಗಿ ಸಾಫ್ಟ್‌ವೇರ್ ಇಂಜಿನಿಯರ್‌ವೊಬ್ಬರು 30ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ರಾಜೇಂದ್ರ ನಗರದ ನಿವಾಸಿ ಪ್ರಿಯಾ ಮಲ್ಲೇಶ ಡೊಳ್ಳಿ ಎಂಬುವರು ಹಣ ಕಳೆದುಕೊಂಡಿದ್ದು, ಈಗಾಗಲೇ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾರ್ಚ್ ಎರಡನೇ ವಾರದಲ್ಲಿ ನಡೆದ ಘಟನೆಯಲ್ಲಿ ಪ್ರಿಯಾ ಬರೋಬ್ಬರಿ 30,75,880 ರೂ.ವಂಚನೆಗೊಳಗಾಗಿದ್ದಾರೆ. ಮಾ. 21ರಂದೇ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಏನಿದು ಘಟನೆ?
ಮಾ. 11 ರಂದು ಪ್ರಿಯಾ ತನ್ನ ತಾಯಿ ವಿದ್ಯಾ ಅವರ ಮೊಬೈಲ್ ವಾಟ್ಸಪ್ ಗಮನಿಸುತ್ತಿದ್ದಾಗ ಅದರಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಓರಿಯನ್ ಡಿಜಿಟಲ್ ಪ್ರಮೋಶನ್ ಎಂಬ ಗುಂಪಿಗೆ ಜಾಯಿನ್ ಮಾಡಿದ್ದಾನೆ. ಅದರಲ್ಲಿ ಪಾರ್ಟ್ ಟೈಮ್ ಜಾಬ್ ಮಾಹಿತಿ ಇದ್ದು, ಗೂಗಲ್ ಬಿಜಿನೆಸ್ ಪೇಜ್ ಬಗ್ಗೆ ಲಿಂಕ್‌ಗಳನ್ನು ಕಳುಹಿಸಿ ಆ ಪೇಜ್‌ಗಳಿಗೆ ರೇಟಿಂಗ್ ನೀಡಿದರೆ ಹಣ ನೀಡುವುದಾಗಿಯೂ, ಒಂದು ಟಾಸ್ಕ್ ಕಂಪ್ಲೀಟ್ ಮಾಡಿದರೆ 200 ರೂ.ಗಳಂತೆ ಹಣ ನೀಡುವುದಾಗಿಯೂ ಮಾಹಿತಿ ಇತ್ತು. ಅದನ್ನು ಒಪ್ಪಿಕೊಳ್ಳಲಾಗಿ ಗ್ರುಪ್ ಟಾಸ್ಕ್, ಪ್ರಿಪೇಯ್ಡಿ ಟಾಸ್ಕ್ ಮಾಡುವಂತೆ ಹೇಳಿ ಲಿಂಕ್ ಕಳುಹಿಸಿ ಲಾಗಿನ್ ಆಗಲು ತಿಳಿಸಿದ್ದಾರೆ. ಆ ಪ್ರಕಾರ ಲಿಂಕ್ ಓಪನ್ ಮಾಡಿ ಲಾಗಿನ್ ಆಗಿರುವ ಪ್ರಿಯಾಗೆ ‘ನೀವು ನಮಗೆ ಹಣ ಹಾಕಿ ಪ್ರಿಪೇಯ್ಡಿ ಡಾಸ್ಕ್ ಕಂಪ್ಲೀಟ್ ಮಾಡಿದರೆ ಅದಕ್ಕೆ ಪ್ರತಿಯಾಗಿ ಶೇ.40 ಕಮೀಷನ್ ಹಣ ಸೇರಿಸಿ ಮರಳಿ ಕೊಡುವುದಾಗಿ’ ತಿಳಿಸಲಾಗಿತ್ತು.
ಆ ಪ್ರಕಾರ ಪ್ರಿಯಾ ಮೊದಲಿಗೆ 32900 ರೂ.ಹಾಕಿದ್ದಾರೆ. ನಂತರ ಬ್ಯಾಲೆನ್ಸ್ ಚೆಕ್ ಮಾಡಲಾಗಿ 49350 ರೂ.ತೋರಿಸಿದೆ. ಆದರೆ, ಹಣ ಡ್ರಾ ಮಾಡಿಕೊಳ್ಳಲು ಹೋದಾಗ ಇನ್ನೂ ಹಣ ಹಾಕಬೇಕು ಎಂದು ಹೇಳಿ ಹಂತ ಹಂತವಾಗಿ 3075880 ರೂಪಾಯಿ ಹಾಕಿಸಿಕೊಂಡಿದ್ದಾರೆ.
ವಂಚನೆಯ ಅರಿವು:
ಕೊನೆಗೆ ಲಿಂಕ್ ಓಪನ್ ಮಾಡಿ ಬ್ಯಾಲೆನ್ಸ್ ಚೆಕ್ ಮಾಡಲಾಗಿ ಅದರಲ್ಲಿ 50 ಲಕ್ಷ ಬ್ಯಾಲೆನ್ಸ್ ತೋರಿಸಿದೆ. ಅಲ್ಲದೇ ಒಟ್ಟಾರೆ ಲಾಭಾಂಶ 70 ಲಕ್ಷ ರೂಪಾಯಿ ಆಗಲಿದ್ದು, ಇನ್ನೂ 5 ಲಕ್ಷ ರೂಪಾಯಿ ಹಾಕಿದರೆ ಎಲ್ಲ ಹಣ ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಸಂಶಯ ಬಂದು ಪ್ರಿಯಾ ತಾವು ಈವರೆಗೆ ಹಾಕಿದ ಹಣವಷ್ಟೇ ನೀಡಿದರೆ ಸಾಕು ಎಂದಿದ್ದಾರೆ. ಆದರೆ, ಹಣ ವಾಪಸ್ ಕೊಡದೇ ಮೋಸ್ ಮಾಡಲಾಗಿದೆ. ಹೀಗಾಗಿ ಪ್ರಿಯಾ ಪೊಲೀಸರಿಗೆ ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)