ವಿಜಯಪುರ

ಶೌಚಾಲಯದ ಗೋಡೆ ಕುಸಿದು ಮೂವರು ಮಹಿಳೆಯರು ಗಾಯ !

ಸರಕಾರ ನ್ಯೂಸ್ ವಿಜಯಪುರ

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಹಲವು ಅವಾಂತರಗಳನ್ನು ಸೃಷ್ಠಿಸುತ್ತಿದ್ದು, ಸಾರ್ವಜನಿಕ ಶೌಚಾಲಯ ಕುಸಿದು ಮೂವರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ.

ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಬೆಳಗ್ಗೆ ಶೌಚಕ್ಕೆ ತೆರಳಿದ ಸಂದರ್ಭ ಏಕಾಏಕಿ ಗೋಡೆ ಕುಸಿದಿದೆ.

 

ಗಾಯಾಳು ಮಹಿಳೆಯರನ್ನು ಆಂಬುಲೆನ್ಸ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿರುವುದು.

ಶೌಚಾಲಯದಲ್ಲಿ‌ ಮೂವರು ಮಹಿಳೆಯರು ಸಿಲುಕಿಕೊಂಡಿದ್ದಾರೆ‌. ತಕ್ಷಣವೇ ಮೂವರು ಮಹಿಳೆಯರನ್ನು‌ ಗ್ರಾಮಸ್ಥರು ಹೊರ ತೆಗೆದಿದ್ದಾರೆ.
ಕಮಲಾಬಾಯಿ ಬಗಲಿ, ಮುಸ್ಕಾನ್ ಕೊಲ್ಹಾರ, ಮುರ್ತುಜಭೀ ಭಾಂಗಿ ಎಂಬುವರು ಗಾಯಗೊಂಡಿದ್ದಾರೆ. ಕೂಡಲೇ ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

error: Content is protected !!