ಕೊಂಡಗೂಳಿ ಪಂಚಾಯಿತಿ ಕರ್ಮಕಾಂಡ, ಅಧ್ಯಕ್ಷೆ ಪುತ್ರನಿಂದ ಕೌಂಟರ್ ಕೇಸ್ ದಾಖಲು, ಏನಿದು ಗಲಾಟೆ? ಇಲ್ಲಿದೆ ಡಿಟೇಲ್ಸ್
ಸರಕಾರ ನ್ಯೂಸ್ ವಿಜಯಪುರ
ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮ ಪಂಚಾಯಿತಿ ಈಗ ಜಿಲ್ಲಾದ್ಯಂತ ಸದ್ದು ಮಾಡುತ್ತಿದ್ದು, ಅವ್ಯವಾಹ, ಬೋಗಸ್ ಬಿಲ್ ಆರೋಪ-ಪ್ರತ್ಯಾರೋಪಗಳ ಮಧ್ಯೆ ಪರಸ್ಪರ ಗಲಾಟೆ ನಡೆದು ಇದೀಗ ಒಬ್ಬರ ಮೇಲೊಬ್ಬರು ಎಫ್ ಐ ಆರ್ ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಾಂದಬಿ ದಸ್ತಗೀರಸಾಬ ಮೋಮಿನ ಇವರ ಪುತ್ರರ ಮೇಲೆ ಪ್ರಕರಣ ದಾಖಲಾಗಿತ್ತು. ಗ್ರಾಮ ಪಂಚಾಯಿತಿಯಲ್ಲಿನ ಅವ್ಯವಹಾರ ಪ್ರಶ್ನಿಸಿದ ಕಾರಣಕ್ಕೆ ತನಿಖೆಗೆ ಬಂದ ಓಂಬುಡ್ಸಮನ್ ಎದುರುಗಡೆಯೇ ಹಲ್ಲೆ ನಡೆದಿದೆ ಎಂದು ಹುಸೇನಸಾಬ ಮುಕ್ತುಮಸಾಬ ಸೋಲಾಪುರ ಎಂಬುವರು ದೂರು ದಾಖಲಿಸಿದ್ದರು. ಅಧ್ಯಕ್ಷೆಯ ಪುತ್ರರಾದ ಬಂದಗೀಸಾಬ ದಸಗೀರಸಾಬ ಮೋಮಿನ ಹಾಗೂ ಖಾದರಸಾಬ ದಸಗೀರಸಾಬ ಮೋಮಿನ ಎಂಬುವರ ಮೇಲೆ ಪ್ರಕರಣ ದಾಖಲಾಗಿತ್ತು.
ಪ್ರತಿ ದೂರು ದಾಖಲು:
ಇದೀಗ ಬಂದಗಿಸಾಬ ದಸಗೀರಸಾಬ ಮೋಮಿನ ಪ್ರತಿ ದೂರು ದಾಖಲಿಸಿದ್ದು, ಹುಸೇನಸಾಬ ಮುಕ್ತುಮಸಾಬ ಸೋಲಾಪುರ ಹಾಗೂ ಮುಕ್ತುಮ ಅಲಿ ಮುಕ್ತುಮಸಾಬ ಸೋಲಾಪುರ ಎಂಬುವರು ತಮ್ಮ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇದನ್ನು ಪ್ರಶ್ನಿಸಲು ಹೋದಾಗ ತಮ್ಮ ಮೇಲೆಯೇ ಕೈ ಮಾಡಿದ್ದಾರೆಂದು ಕಲಕೇರಿ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಎರಡೂ ಕಡೆಯವರಿಂದ ದೂರು ದಾಖಲಾಗಿದ್ದು ಪ್ರಕರಣ ದಿನೇ ದಿನೇ ಚುರುಕು ಪಡೆಯುತ್ತಿದೆ. ಇನ್ನೊಂದೆಡೆ ಒಂಬುಡ್ಸಮನ್ ತನಿಖೆ ಮುಂದುವರಿಸಿದ್ದಾರೆ. ಇನ್ನೂ ಎಲ್ಲಿಗೆ ಹೋಗಿ ತಲುಪುವುದೋ ಕಾದು ನೋಡಬೇಕಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)