ವಿಜಯಪುರ

ಪಾರ್ಟ್‌ ಟೈಮ್‌ ಜಾಬ್‌ಗೋಸ್ಕರ ಎರಡೂವರೆ ಲಕ್ಷ ಖೋತಾ, ಟಾಸ್ಕ್‌ ನಂಬಿ ಮೋಸ ಹೋದ ರೈತ……ಎಚ್ಚರ ! ನಿಮಗೂ ಹೀಗಾಗಬಹುದು

ಸರಕಾರ ನ್ಯೂಸ್‌ ವಿಜಯಪುರ

ಪಾರ್ಟ್‌ ಟೈಮ್‌ ಜಾಬ್‌ ಗೋಸ್ಕರ ರೈತನೋರ್ವ 2.62 ಲಕ್ಷ ರೂ.ಮೋಸ ಹೋದ ಪ್ರಕರಣ ಬೆಳಕಿಗೆ ಬಂದಿದೆ.

ಬಸವನಬಾಗೇವಾಡಿಯ ಅರಳಚಂಡಿ ನಿವಾಸಿ ಆದಿತ್ಯ ಶ್ರೀಕಾಂತ ಅವಟಿ (29) ಮೋಸಕ್ಕೊಳಗಾದ ರೈತ. ಮನೆಯಲ್ಲಿಯೇ ಕುಳಿತು ಪಾರ್ಟ್‌ಟೈಮ್‌ ಜಾಬ್‌ ಮಾಡಿ ಹಣಗಳಿಸಬಹುದೆಂಬ ಮೊಬೈಲ್‌ ಸಂದೇಶಕ್ಕೆ ಮಾರು ಹೋಗಿ ಆದಿತ್ಯ ಹಂತ ಹಂತವಾಗಿ ಎರಡೂವರೆ ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಅನೈತಿಕ ಸಂಬಂಧ ಬಿಡು ಎಂದಿದ್ದಕ್ಕೆ ಗಂಡನೆ ಕೊಲೆ, ಕೊಡಲಿಯಿಂದ ಕೊಚ್ಚಿ ಕೊಂದು, ಬೆಂಕಿಯಲ್ಲಿ ದಹಿಸಿದರು…..ಅಬ್ಬಬ್ಬಾ ಇದೇಂಥಾ ಕ್ರೌರ್ಯ? ಏನಿದು ಪ್ರಕರಣ? ಇಲ್ಲಿದೆ ಇಂಟ್ರೆಸ್ಟಿಂಗ್‌ ಕ್ರೈಂ ಸ್ಟೋರಿ…

ಮೋಸಹೋಗಿದ್ದು ಹೇಗೆ?

2023 ಜೂ.30ರಂದು ಮಧ್ಯಾಹ್ನ 3.30ರ ಸುಮಾರಿಗೆ ಆದಿತ್ಯ ಮೊಬೈಲ್‌ಗೆ ಪಾರ್ಟ್‌ ಟೈಮ್‌ ಜಾಬ್‌ಗೆ ಸಂಬಂಧಿಸಿದ ಮೊಬೈಲ್‌ ಸಂದೇಶ ಬಂದಿದೆ. ಗೂಗಲ್‌ ಮ್ಯಾಪ್‌ನಲ್ಲಿ ಕಳುಹಿಸುವ ಹೋಟೆಲ್‌ಗೆ ರೇಟಿಂಗ್‌ ಕೊಟ್ಟರೆ ಪ್ರತಿ ಎರಡು ಟಾಸ್ಕ್‌ಗೆ 150 ರೂಪಾಯಿ ಕೊಡುವುದಾಗಿ ಸಂದೇಶದಲ್ಲಿ ತಿಳಿಸಲಾಗಿದೆ. ಆ ಪ್ರಕಾರ ಲಿಂಕ್‌ ಓಪನ್‌ ಮಾಡಿ ಎರಡು ಟಾಸ್ಕ್‌ ಪೂರೈಸಿದ್ದು ಕೂಡಲೇ ಟೆಲಿಗ್ರಾಂ ಲಿಂಕ್‌ ಬಂದಿದೆ. ಅದರಲ್ಲಿ ಬ್ಯಾಂಕ್‌ ಖಾತೆಯ ವಿವರ ಕೇಳಿದ್ದು ಆ ಪ್ರಕಾರ ಆದಿತ್ಯ ಬ್ಯಾಂಕ್‌ ವಿವರ ನೀಡಿದ್ದಾರೆ. ಬಳಿಕ ಮತ್ತೆ ಟಾಸ್ಕ್‌ ನೀಡಿದ್ದು ಆ ಪ್ರಕಾರ ಟಾಸ್ಕ್‌ ಪೂರೈಸಿದಾಗ ಆರಂಭದಲ್ಲಿ ಹಣ ಜಮಾ ಮಾಡಿದ್ದಾರೆ.

ಹೆಚ್ಚಿನ ಹಣದ ಆಮಿಷ:

ಹೀಗೆ ಟಾಸ್ಕ್‌ಗಳನ್ನು ಪೂರೈಸುತ್ತಲೇ ಇದ್ದ ಆದಿತ್ಯನಿಗೆ ಮತ್ತೊಂದು ಸಂದೇಶ ಬಂದಿದ್ದು ನೀವು ಎಷ್ಟು ಹಣ ಡೆಪಾಸಿಟ್‌ ಮಾಡುತ್ತೀರಿ ಅದರ ಶೇ.30ರಷ್ಟು ಕಮಿಷನ್‌ ಕೊಡುವುದಾಗಿ ಹೇಳಿದ್ದಾರೆ. ಅಲ್ಲದೇ ನಿಮ್ಮ ಹಣವನ್ನು ಟ್ರೇಡಿಂಗ್‌ ಮಾಡಿಸುವುದಾಗಿ ಹೇಳಿ ಯುಪಿಐ ಮೂಲಕ ಹಣ ಪಡೆದು ಕೂಡಲೇ ಮರಳಿ ಹಣ ಸಂದಾಯ ಮಾಡಿದ್ದಾರೆ. ಹಾಗೆ ಹಂತ ಹಂತವಾಗಿ 2.62 ಲಕ್ಷ ರೂ.ವರೆಗೆ ಹಣ ಹಾಕಿಸಿಕೊಂಡು ಕೈ ಎತ್ತಿದ್ದಾರೆ. ಮೋಸದ ಅರಿವಾದ ಆದಿತ್ಯ ಇದೀಗ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!