ಅನೈತಿಕ ಸಂಬಂಧ ಬಿಡು ಎಂದಿದ್ದಕ್ಕೆ ಗಂಡನೆ ಕೊಲೆ, ಕೊಡಲಿಯಿಂದ ಕೊಚ್ಚಿ ಕೊಂದು, ಬೆಂಕಿಯಲ್ಲಿ ದಹಿಸಿದರು…..ಅಬ್ಬಬ್ಬಾ ಇದೇಂಥಾ ಕ್ರೌರ್ಯ? ಏನಿದು ಪ್ರಕರಣ? ಇಲ್ಲಿದೆ ಇಂಟ್ರೆಸ್ಟಿಂಗ್ ಕ್ರೈಂ ಸ್ಟೋರಿ…
ಸರಕಾರ ನ್ಯೂಸ್ ವಿಜಯಪುರ
ಅನೈತಿಕ ಸಂಬಂಧ ಉಳಿಸಿಕೊಳ್ಳಲೆಂದು ಗಂಡನನ್ನೇ ಕೊಲೆಗೈದು ಸುಟ್ಟು ಹಾಕಿರುವ ರೋಚಕ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಸವನಬಾಗೇವಾಡಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು, ಜಕರಾಯ (40) ಎಂಬಾತ ಕೊಲೆಗೀಡಾಗಿದ್ದಾನೆ. ಈತನ ಪತ್ನಿ ಜಯಶ್ರೀ ಹಾಗೂ ಅವಳೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದ ಡೊಂಗ್ರೀಸಾಬ್ ಜತೆಯಾಗಿ ಈ ಕೃತ್ಯ ಎಸಗಿದ್ದಾರೆಂದು ಜಕರಾಯನ ತಂದೆ ಭೀಮರಾಯ ಪೊಲೀಸರಿಗೆ ದೂರು ನೀಡಿದ್ದಾನೆ.
ಪ್ರಕರಣದ ವಿವರ:
ಸುಮಾರು 2 ವರ್ಷಗಳ ಹಿಂದೆ ಜಕರಾಯನು ತನ್ನ ಹೆಂಡತಿ ಜಯಶ್ರೀ ಯೊಂದಿಗೆ ಜಗಳ ಮಾಡಿಕೊಂಡು ತನ್ನ ಎರಡು ಮಕ್ಕಳೊಂದಿಗೆ ಹೆಗಡಿಹಾಳಕ್ಕೆ ಬಂದು ನೆಲೆಸಿದ್ದನು. ಈ ಬಗ್ಗೆ ಕುಟುಂಬಸ್ಥರು ವಿಚಾರಿಸಲಾಗಿ ತನ್ನೊಂದಿಗೆ ಹೆಂಡತಿ ಚೆನ್ನಾಗಿ ಬಾಳುತ್ತಿಲ್ಲವೆಂದು ತಿಳಿಸಿದ್ದನು. ಬಳಿಕ ಆಗಾಗ ಹೆಂಡತಿ ಬಳಿ ಹೋಗಿಯೂ ಬರುತ್ತಿದ್ದನು.
2023 ಸಂಜೆ 5ರ ಸುಮಾರಿಗೆ ಹೆಂಡತಿ ಬಳಿ ಹೋಗುವುದಾಗಿ ಹೋಗಿದ್ದ ಜಕರಾಯ ಮರಳಿ ಮನೆಗೆ ಬಂದಿರಲಿಲ್ಲ. ಮನೆಯಲ್ಲಿ ಮಕ್ಕಳು ಅಳುವುದನ್ನು ಕಂಡ ತಾತ ಭೀಮರಾಯ ಜಯಶ್ರೀಯನ್ನು ವಿಚಾರಿಸಲಾಗಿ ಜಕರಾಯ ಬಂದಿದ್ದು ನಿಜ ಆದರೆ ವಾಪಸ್ ಹೆಗಡಿಹಾಳಕ್ಕೆ ಹೋಗಿದ್ದಾಗಿ ತಿಳಿಸಿದ್ದಳು. ಮೊದಲೇ ಚಾಲಕನಾಗಿದ್ದ ಜಕರಾಯ ಎಲ್ಲಿಯಾದರೂ ಬಾಡಿಗೆ ಹೋಗಿರಬಹುದೆಂದು ಮನೆಯವರು ಸುಮ್ಮನಾಗಿದ್ದರು. ಬಳಿಕ ಹುಡುಕಾಡಿದರೂ ಜಕರಾಯ ಸಿಕ್ಕಿರಲಿಲ್ಲ. ಹೀಗಾಗಿ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಸಲಿಗೆ ಆದದ್ದೇ ಬೇರೆ:
ಆದರೆ, ಹೀಗೆ ಕಾಣೆಯಾದ ಜಕರಾಯ ಕೊಲೆಯಾಗಿದ್ದಾನೆಂಬುದು ಜಯಶ್ರೀ ಬಾಯಿಂದಲೇ ಹೊರಬಿದ್ದಿದೆ. ಜಕರಾಯನ ತಂದೆ ಭೀಮರಾಯ ಜಯಶ್ರೀ ಮನೆಗೆ ಹೋಗಿ ವಿಚಾರಿಸಿದಾಗ ಜಯಶ್ರೀಯೇ ಈ ಬಗ್ಗೆ ಬಾಯಿ ಬಿಟ್ಟಿದ್ದು, ಆ ಪ್ರಕಾರ ತಾನು ಡೋಂಗ್ರಿಸಾಬ್‌ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದನ್ನು ಜಕರಾಯ ಸಹಿಸುತ್ತಿರಲಿಲ್ಲ. ಆಗಾಗ ಕಿರಿಕಿರಿ ಮಾಡುತ್ತಿದ್ದರಿಂದ ಡೊಂಗ್ರೀಸಾಬ್ ತಿಳಿಸಿದ್ದೆ. ಜಕರಾಯ ಮನೆಗೆ ಬಂದಾಗ ಡೋಂಗ್ರಿಸಾಬ್ ಬಂದು ಕೊಡಲಿಯಿಂದ ಹೊಡೆದು ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹೋಗಿ ಸುಟ್ಟಿದ್ದಾನೆಂದು ಬಾಯಿ ಬಿಟ್ಟಿರುವ ಜಯಶ್ರೀ ತನ್ನ ತಪ್ಪನ್ನು ಕ್ಷಮಿಸುವಂತೆ ಭೀಮರಾಯ ಬಳಿ ಬೇಡಿಕೆಯೊಂಡಿದ್ದಾಳೆ. ಹೀಗಾಗಿ ಭೀಮರಾಯ ಇದೀಗ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿದಿದೆ.
(ಕ್ಷಣ ಕ್ಷಣದ ಕುತೂಹಲಕಾರಿ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)