ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ, ಪಿಎಸ್‌ಐ ಸೋಮೇಶ ಗೆಜ್ಜಿ ದಾಳಿ, ಹೇಗಿತ್ತು ಗೊತ್ತಾ ಕಾರ್ಯಾಚರಣೆ?
ಸರಕಾರ ನ್ಯೂಸ್ ಇಂಡಿ
ಭೀಮಾತೀರದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಿಎಸ್‌ಐ ಸೋಮೇಶ ಗೆಜ್ಜಿ ಕಾರ್ಯೋನ್ಮುಖವಾಗಿದ್ದು, ದಿಢೀರ್ ದಾಳಿ ನಡೆಸಿ ಟ್ರ್ಯಾಕ್ಟರ್ ಮತ್ತು ಮರಳು ವಶಕ್ಕೆ ಪಡೆದಿದ್ದಾರೆ.
ಇಂಡಿ ತಾಲೂಕಿನ ಬರಗುಡಿ ಗ್ರಾಮದ ಹತ್ತಿರ ಇರುವ ಭೀಮಾ ನದಿಯ ದಂಡೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಮರಳು ತುಂಬುತ್ತಿದ್ದರು. ಕೂಡಲೇ ಪಿಎಸ್‌ಐ ಸೋಮೇಶ ಗೆಜ್ಜಿ ಮಿಂಚಿನ ಕಾರ್ಯಾಚರಣೆಗೆ ಇಳಿದರು. ಸೋಮೇಶ ಅವರ ಪೊಲೀಸ್ ಜೀಪ್ ನೋಡುತ್ತಿದ್ದಂತೆ ದಂಧೆಕೋರರು ಕಾಲಿಗೆ ಬುದ್ದಿ ಹೇಳಿದ್ದಾರೆ.
ಬಂಗಾರದಂಗಡಿ ಮಾಲೀಕನಿಗೆ ಮಕಮಲ್ ಟೋಪಿ, ಮರಾಠಿಯಲ್ಲಿ ಮಾತಾಡಿ ಮರಳು ಮಾಡಿದಾಕೆ ಕದ್ದ ಚಿನ್ನವೆಷ್ಟು ಗೊತ್ತೆ?
ಸ್ಥಳದಲ್ಲಿಯೇ ಬಿಟ್ಟು ಹೋದ ಅಂದಾಜು 5 ಲಕ್ಷ ರೂ.ಮೌಲ್ಯದ ಟ್ರ್ಯಾಕ್ಟರ್ ಹಾಗೂ 1000 ರೂ.ಮೌಲ್ಯದ ಮರಳು ಸೇರಿ ಒಟ್ಟು 5,01,000 ರೂ.ಮೌಲ್ಯದ ಸಾಮಗ್ರಿ ಜಫ್ತು ಮಾಡಿಕೊಳ್ಳಲಾಗಿದೆ. ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)