ವಿಜಯಪುರ

ಗೃಹ ಪ್ರವೇಶಕ್ಕೆಂದು ಹೋದರೆ ಸ್ವರ್ಗಕ್ಕೆ ಆಹ್ವಾನಿಸಿದ ಯಮರೂಪಿ ವಾಹನ !

ಸರಕಾರ ನ್ಯೂಸ್‌ ವಿಜಯಪುರ

ಪರಿಚಯಿಸ್ಥರ ಆಹ್ವಾನದ ಮೇರೆಗೆ ಗೃಹ ಪ್ರವೇಶಕ್ಕೆಂದು ಹೋದರೆ ಯಮರೂಪಿ ವಾಹನ ಸ್ವರ್ಗಕ್ಕೆ ಆಹ್ವಾನ ನೀಡುವುದೇ ?

ಹೌದು, ಇಂಥದ್ದೊಂದು ಕರಾಳ ಸನ್ನಿವೇಶ ಕಂಡು ಬಂದಿದ್ದು, ವಿಜಯಪುರ-ಆಲಮಟ್ಟಿ ಹೆದ್ದಾರಿಯಲ್ಲಿ ಬರುವ ಹಿಟ್ಟಿನಹಳ್ಳಿ ಬಸ್‌ ನಿಲ್ದಾಣದ ಹತ್ತಿರ. ಘಟನೆಯಲ್ಲಿ ರಾಮಗೊಂಡ ಮಲ್ಲಪ್ಪ ತಿಕೋಟಿ (43) ಎಂಬಾತ ಅಸುನೀಗಿದ್ದು, ಆತನ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.

ಆ. 28ರಂದು ರಾಮಗೊಂಡ ಪರಿಚಯದ ಬಸಪ್ಪ ವನರೊಟ್ಟಿ ಎಂಬುವರ ಗೃಹ ಪ್ರವೇಶ ಇದ್ದು, ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಆ.27ರಂದು ಮನೆಯಲ್ಲಿ ಪತ್ನಿ ಸುರೇಖಾಗೆ ತಿಳಿಸಿ ಹೋಗಿದ್ದಾನೆ. ಜಯಶ್ರೀ ಕೂಡ ಗೃಹ ಪ್ರವೇಶಕ್ಕೆ ತೆರಳಿದ್ದಾನೆಂದು ಸುಮ್ಮನಾಗಿದ್ದಾಳೆ. ಆದರೆ, ಅದೇ ದಿನ ರಾತ್ರಿ 8.15ಕ್ಕೆ ಚಿನ್ನಪ್ಪ ಭೀಮಪ್ಪ ತಿಕೋಟಿ ಎಂಬಾತ ಫೋನ್‌ ಮಾಡಿ ರಾಮಗೊಂಡನಿಗೆ ವಾಹನ ಅಪಘಾತವಾಗಿದೆ ಎಂದು ಹೇಳಿದಾಗ ಜಯಶ್ರೀಯ ಜಂಘಾಬಲವೇ ಉಡುಗಿದೆ.

ರಾಘವೇಂದ್ರ, ರಾಕೇಶ ಎಂಬ ಮಕ್ಕಳನ್ನು ಹೊಂದಿರುವ ಜಯಶ್ರೀ ಆಘಾತದಿಂದ ಹೋಗಿ ನೋಡಲಾಗಿ ಆಂಬುಲೆನ್ಸ್‌ ಮೂಲಕ ರಾಮಗೊಂಡನನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ನಡೆದಿತ್ತು. ತಲೆಗೆ, ಹಣೆಗೆ ಗಂಭೀರ ಗಾಯವಾಗಿದ್ದ ರಾಮಗೊಂಡನನ್ನು ಕೂಡಲೇ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ರಾಮಪ್ಪ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. ಮನೆಯ ಯಜಮಾನನ್ನು ಕಳೆದುಕೊಂಡ ಜಯಶ್ರೀ ಕುಟುಂಬ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ಸ್ಕೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!