ವಿಜಯಪುರ

ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮ, ಅನುದಾನಕ್ಕಾಗಿ ಅಂಗಲಾಚಿದ ಶಾಸಕ, ಮೆಗಾ ಮಾರುಕಟ್ಟೆಗಾಗಿ ಶಾಸಕ ದೇವಾನಂದ ಚವ್ಹಾಣ್‌ ಸದನದಲ್ಲಿ ಧ್ವನಿ !

ವಿಜಯಪುರ: ಭೀಮಾತೀರದ ನಾಗಠಾಣ ವಿಧಾನ ಸಭೆ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ್‌ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಒದಗಿಸುವಂತೆ ತೀವ್ರ ಕಳಕಳಿಯಿಂದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಂಗಳವಾರ ಸದನದಲ್ಲಿ ಅನುದಾನದ ವಿಷಯಕ್ಕಾಗಿ ಧ್ವನಿ ಎತ್ತಿರುವ ಅವರು, ನಾಗಠಾಣ ಕ್ಷೇತ್ರದಲ್ಲಿ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾದ ಮಹಾಯೋಜನೆಯ ಪ್ರದೇಶಗಳನ್ನು ಅಧಿಕೃತಗೊಳಿಸಲು ಮನವಿ ಮಾಡಿದರು. ಆದರೆ, ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಕಾರಣ ಅಸಾಧ್ಯ ಕೆಲಸ ಎಂದು ಸಂಬಂಧಿಸಿದ ಸಚಿವರು ಉತ್ತರಿಸಿದರು.

ಅಭಿವೃದ್ಧಿ ವಿಚಾರ ಮುಂದುವರಿಸಿದ ಶಾಸಕ ದೇವಾನಂದ, ಚಡಚಣ ಪಟ್ಟಣ ಪಂಚಾಯಿತಿ ಮಹಾರಾಷ್ಟ್ರದ ಗಡಿಭಾಗದಲ್ಲಿದೆ. ಅಲ್ಲಿ ಈಗಾಗಲೇ ಸಾಕಷ್ಟು ವ್ಯಾಪಾರ ಮಾಡುವುದು, ಬೇರೆ ಬೇರೆ ರಾಜ್ಯಗಳಿಂದ ಬಂದು ಸಾಕಷ್ಟು ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದ ಪಟ್ಟಣ ದೊಡ್ಡದಾಗಿ ಬೆಳೆದಿದೆ. ಅದಕ್ಕೆ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಈಗಾಗಲೇ ಸರ್ಕಾರದ 6 ಎಕರೆ ಜಾಗ ಸಂಪೂರ್ಣ ಅತಿಕ್ರಮಣವಾಗಿದೆ. ಆ ಜಾಗವನ್ನು ಉಪಯೋಗ ಮಾಡಿಕೊಂಡು ಮೆಗಾ ಮಾರುಕಟ್ಟೆ ನಿರ್ಮಿಸಿ ಒಂದೇ ಸೂರಿನಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಅದಕ್ಕಾಗಿ ಚಡಚಣ ಪಟ್ಟಣದಲ್ಲಿಮೆಗೆ ಮಾರಕಟ್ಟೆ ನಿರ್ಮಾಣಕ್ಕೆ ಸಂಬಂದಿಸಿದಂತೆ ಶೀಘ್ರದಲ್ಲೀಯೇ ಪ್ರಸ್ತಾವನೆ ಸ್ವೀಕರಿಸಿ ಎಸ್‌ಎಫ್‌ಸಿ ಅನುದಾನದಡಿ 10 ಕೋಟಿ ರೂ. ಅನುದಾನ ಮಂಜೂರಿಸಲು ಮನವಿ ಮಾಡಿದರು. ಸರ್ಕಾರ ಸಕಾರಾತ್ಮಕವಾಗಿ ಒಪ್ಪಿಕೊಂಡಿದ್ದು ಶೀಘ್ರದಲ್ಲೇ ಪ್ರಸ್ತಾವನೆ ಸ್ವೀಕರಿಸಿ ಅನುದಾನ ನೀಡುವ ಭರವಸೆ ನೀಡಿತು.

ಒಟ್ಟಿನಲ್ಲಿ ಶಾಸಕ ಡಾ.ದೇವಾನಂದ ಚವ್ಹಾಣ್‌ ರಾಜ್ಯದಲ್ಲಿ ತಮ್ಮದು ಆಡಳಿತ ಪಕ್ಷ ಇಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲು ಇನ್ನಿಲ್ಲದ ಶ್ರಮ ವಹಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಇವರ ಕಳಕಳಿ ಮೆಚ್ಚುವಂಥದ್ದು.

 

error: Content is protected !!