ವಿಜಯಪುರ

ವಿಜಯಪುರದಲ್ಲಿ ಬೆಳ್ಳೆಂಬೆಳಗ್ಗೆಯೇ ಎಸಿಬಿ ದಾಳಿ, ನಿರ್ಮಿತಿ‌ ಕೇಂದ್ರದ‌ ಅಧಿಕಾರಿ ಮನೆ ಮೇಲೆ ದಾಳಿ-ದಾಖಲೆ ಪರಿಶೀಲನೆ

ವಿಜಯಪುರ: ಅವಳಿ ಜಿಲ್ಲೆಯಲ್ಲಿ ಬುಧವಾರ ಬೆಳ್ಳೆಂಬೆಳಗ್ಗೆಯೇಸಿ ಎಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿಜಯಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋಪಿನಾಥ ಸಾ ಮಳಜಿ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಎಸಿಬಿ ಎಸ್ ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ.

ವಿಜಯಪುರದಲ್ಲಿನ ಮೂರು ಹಾಗೂ ಬಾಗಲಕೋಟೆ ಯಲ್ಲಿನ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ವಿಜಯಪುರ ಆದರ್ಶನಗರದಲ್ಲಿನ ಪಾಟೀಲ ಪ್ಲಾನೆಟ್ ಹಿಂಭಾಗದ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.
ಡಿವೈಎಸ್ ಪಿ ಮಂಜುನಾಥ ಗಂಗಲ್ಲ, ಇನ್ ಸ್ಪೆಕ್ಟರ್ ಗಳಾದ ಪರಮೇಶ್ವರ ಕವಟಗಿ ಮತ್ತಿತರರಿದ್ದಾರೆ.

error: Content is protected !!