ಸಾಹಿತ್ಯ

ನಿನಗಿಂತ ನಿನ್ನ ನೆನಪೇ ಸಾಕು ನನಗೆ….ಇದು ಪಾಗಲ್‌ ಪ್ರೇಮಿಯೊಬ್ಬನ ಮನದಾಳದ ಮಾತು……ಲೈಕ್‌ ಆದರೆ ಕಮೆಂಟ್‌ ಮಾಡಿ, ಇಷ್ಟಾ ಆದ್ರೆ ಶೇರ್‌ ಮಾಡಿ…

ಕುಡಿಯೋದು ಈಗ ಅಭ್ಯಾಸವಾಗಿ ಬಿಟ್ಟಿದೆ. ಮೊದಲೆಲ್ಲಾ ಸ್ವಲ್ಪ ಸ್ವಲ್ಪ ಕುಡಿತಿದ್ದೋನು ಈಗೆಲ್ಲಾ ದಿನಾ ಕುಡಿತೇನೆ. ಒಮ್ಮೊಮ್ಮೆ ಬೆಳಗ್ಗೆಯಿಂದಲೇ ಶುರು ಹಚ್ಚಿಕೊಂಡು ಬಿಟ್ಟಿರುತ್ತೇನೆ. ಯಾಕಂದ್ರೆ ಅದಿಲ್ದೆ ನನಗೆ ಜೀವನಾನೇ ಇಲ್ಲ ಅನ್ನಿಸ್ತಿದೆ. ಹೇ….ನಿಜ ಹೇಳಲಾ? ಈ ಕುಡಿತ ಇದೆಯಲ್ಲ, ಅದೀಗ ನಿನಗಿಂತಲೂ ವಾಸಿ ಅನ್ನಿಸ್ತಿದೆ ಕಣೆ. ನನ್ಮಗಂದ್ ಮೊದಲೆಲ್ಲಾ ನಿನ್ನ ನೋಡಿದ್ರೆ ಸಾಕು ನಶೆ ಏರತಿತ್ತು…ಯಾವಾಗ ನೀ ನನ್ನ ಒಂಟಿ ಮಾಡಿ ಹೋದೆಯೋ ಆಗಿನಿಂದ ಎಷ್ಟು ಕುಡಿದರೂ ನಶೆ ಏರತಾನೇ ಇಲ್ಲ. ಅದಕ್ಕೆ ಈ ಕುಡಿತ ಮತ್ತೆ ಆ ನಿನ್ನ ಹಾಳಾದ ನೆನಪು ಒಟ್ಟಿಗೆ ಸೇರಿಸಿ ಕುಡಿತಾ ಇದೀನಿ. ಸ್ವಲ್ಪ ನಶೆಯಾಗುತ್ತೆ. ಆಗ ನೀ ನೆನಪಾಗ್ತಿಯಾ? ಮತ್ತಷ್ಟು ಕುಡಿತೀನಿ….ಯಾಕೆ ಹೇಳು? ನಿನ್ನ ನಶೆ ಯಾವಾಗಲೂ ಇಳಿಬಾರದು. ಈ ಕುಡಿತ ಮತ್ತೆ ಆ ನಿನ್ನ ನೆನಪು ಸದಾ ನನ್ನ ಜೊತೆ ಇರಬೇಕು. ಆ ನೆನಪಲ್ಲೇ ನಾ ಕುಡಿಬೇಕು. ಕುಡಿದು… ಕುಡಿದು ಸಾಯಬೇಕು. ಸತ್ತ ಮೇಲೂ ನಿನ್ನ ನೆನಪು ಕಾಡತಾನೇ ಇರಬೇಕು. ಯಾಕಂದ್ರೆ ನಿನ್ನ ನೆನಪು ಇಲ್ದೆ ಆ ಸ್ವರ್ಗನೂ ನರಕ ಅನ್ನಿಸುತ್ತೆ ಕಣೆ ! ಅದ್ಯಾಕೋ ನಿನಗಿಂತ ನಿನ್ನ ನೆನಪೇ ವಾಸಿ ಅನ್ನಿಸ್ತಿದೆ. ಯಾಕಂದ್ರೆ ನಿನ್ನ ಥರ ಅದು ಒಂಟಿಯಾಗಿ ಬಿಟ್ಟು ಹೋಗಲ್ಲ ನೋಡು ! ಅದಕ್ಕೆ. ನಾ ಕುಡಿತಿದ್ರೂ ಜೊತೆಗಿರುತ್ತೆ, ಒಳಗೊಳಗೇ ಮಾತಾಡಿಸುತ್ತೆ, ಗುನುಗುತ್ತೆ, ಹಾಡಿಸುತ್ತೆ, ಕುಣಿಸುತ್ತೆ….ಆ ನಿನ್ನ ನೆನಪಿನ ಚೆಲ್ಲಾಟದಲ್ಲೇ ನಾ ನನ್ನನ್ನೇ ಮರೆಯುತ್ತೇನೆ….ನನಗಾಗ ಏನೆಂದರೆ ಏನೂ ನೆನಪಿರಲ್ಲ. ನನ್ನಲ್ಲಿ ನೀ ಮಾತ್ರ ಇರುವೆ. ನನ್ನೆದೆಯ ತುಂಬಿಕೊಳ್ಳುವೆ. ಜೊತೆಗೊಂದಿಷ್ಟು ಶೆರೆ ಇರುತ್ತೆ. ಇದಿಷ್ಟು ಬಿಟ್ಟರೆ ನನಗಾದರೂ ಏನು ಬೇಕಿದೆ ಹೇಳು? ನೋಡಿದೋರೆಲ್ಲ ಕುಡುಕ ಅಂತಾರೆ, ಹುಚ್ಚ ಅಂತಾರೆ, ಬೈತಾರೆ….ಪರ್ವಾಗಿಲ್ಲ ನಾನು ಕುಡುಕಾನೆ. ನಿನ್ನ ಪ್ರೀತಿಯ ಕುಡುಕ. ಹುಚ್ಚಾನೆ….ಪ್ರೇಮದ ಹುಚ್ಚ. ಈ ಹುಚ್ಚನ ಪ್ರಪಂಚ ಎಷ್ಟು ಸೊಗಸಾಗಿದೆ ಅಂತಾ ಅವರಿಗೇನು ಗೊತ್ತು? ಈ ನನ್ನ ಪ್ರೇಮಲೋಕದಲ್ಲಿ ಎಷ್ಟು ಆನಂದವಿದೆ ಅಂತಾ ಅನುಭವಿಸಿದವರಿಗೆ ಮಾತ್ರ ಗೊತ್ತು. ಈ ಜೀವನಕ್ಕೆ ಇಷ್ಟು ಸಾಕು ಅನ್ನಿಸುತ್ತೆ. ಮುಂದಿನ ಜನ್ಮ ಅಂತಿದ್ರೆ ಮತ್ತೆ ಸಿಗೋಣ. ಸಾಧ್ಯವಾದರೆ ಒಟ್ಟಿಗೆ ಇರೋಣ….ನೆನಪುಗಳನ್ನು ಹಂಚಿಕೊಳ್ಳೋಣ. ಅಲ್ಲಿವರೆಗೆ ಈ ಖಾಲಿ ಬಾಟಲಿಗಳಲ್ಲಿ ನಿನ್ನ ನೆನಪುಗಳನ್ನು ಕೂಡಿ ಇಡುತ್ತಲೇ ಇರುತ್ತೇನೆ.
ಹಾಂ…. ಮರೆತಿದ್ದೆ. ಅದೇನು ಗೊತ್ತಾ? ನೀನು ಕೊನೇ ಬಾರಿ ನನ್ನ ಬಿಟ್ಟುಹೋಗುವಾಗ ಗಡ್ಡ ಬೋಳಿಸಿಕೋ ಎಂದು ಕೊಟ್ಟ ಹಣವೂ ಕುಡೀಲಿಕ್ಕೆ ಖರ್ಚಾಯಿತು ಕಣೆ. ಆ ಶೆರೆ ಎಷ್ಟು ಸಖತ್ತಾಗಿ ಕಿಕ್ ಕೊಟ್ಟಿತು ಗೊತ್ತಾ? ನನ್ನ ಕುಡಿತದ ಇತಿಹಾಸದಲ್ಲೇ ಅದು ಮರೆಯದ ಅನುಭವ. ಪ್ರೀತಿಸಿದೋಳ ಕೈಯಿಂದ ವಿಷ ಕುಡಿದರೂ ಅಮೃತ ಅಂತಾರಲ್ಲ ಹಾಗಿತ್ತು ಅದು. ಇನ್ನೊಮ್ಮೆ ಸಿಕ್ಕಾಗ ಕುಡೀಲಿಕ್ಕೆಂದೇ ನಾಚಿಕೆ ಬಿಟ್ಟು ಹಣ ಕೇಳಬೇಕೆಂದು ನಿರ್ಧರಿಸಿದ್ದೆ. ಆದರೆ ನಿನಿಗಿಂತ ನಿನ್ನ ನೆನಪೇ ಹೆಚ್ಚು ನಶೆ ಏರಿಸುತ್ತಿರುವುದು ಗೊತ್ತಾಗಿ ಆ ನಿರ್ಧಾರ ಕೈ ಬಿಟ್ಟೆ.
ಕುಡಿಬೇಡ ಕಣೋ ಅನ್ನೋ ನೈತಿಕತೆ ನಿನಗಾದರೂ ಎಲ್ಲಿದೆ ಹೇಳು? ಹಾಗೊಂದು ವೇಳೆ ಕುಡಿಬೇಡ ಅಂದ್ರೂ ಅದು ನನಗೆ ಬದುಕಬೇಡ ಣೋ ಅಂದಂಗೆ ಕೇಳಿಸುತ್ತೆ. ಪ್ರೀತಿಸಿ ಕೈ ಕೊಟ್ಟ ಮೇಲೆ ಕುಡಿಬೇಡ ಅನ್ನೋದು….ಬದುಕಬೇಡ ಅಂದಂತೆ ಅಲ್ವಾ? ಅದಕ್ಕೆ ನಾನು ಕುಡಿತೀದೀನಿ….ಅರ್ಥಾತ್ ಬದುಕುತ್ತಿದ್ದೇನೆ….ಏಕೆಂದರೆ ನಿನಗೋಸ್ಕರ… ಸಾರಿ ನಿನ್ನ ನೆನಪಿಗೋಸ್ಕರ. ನೀನು ಕೊಲೆಗಾರತಿ ಎಂಬ ಪಟ್ಟ ಕಟ್ಟಿಕೋಬಾರದು ಎಂಬ ಕಾರಣಕ್ಕೋಸ್ಕರ. ಎನಿವೇ ದಿಸ್ ಈಸ್ ಲಾಸ್ಟ್ ಪೆಗ್…ಗುಡ್ ಬೈ…..

ಇಂತಿ ನಿನ್ನ ಕುಡುಕ ಪ್ರೇಮಿ

error: Content is protected !!