ಸಾಹಿತ್ಯ

ಕಾಣೆಯಾಗಿದ್ದಾನೆ ಮನುಷ್ಯ, ಕಣ್ಮರೆಯಾಗಿದೆ ಮನುಷ್ಯತ್ವ……ಮಾನವೀಯ ಕಳಕಳಿಯ ಕವಿತೆ ಓದಿ…

ಕಾಣೆಯಾಗಿದ್ದಾನೆ ಮನುಷ್ಯ
ಕಣ್ಮರೆಯಾಗಿದೆ ಮನುಷ್ಯತ್ವ

ಹಿಂದು ಮುಸ್ಲಿಂ ಕ್ರೈಸ್ತರ ಮಧ್ಯೆ
ಜೈನ್‌ ಬೌದ್ಧ ಸಿಖ್‌ರ ನಡುವೆ
ಮಂದಿರ ಮಸೀದಿ ಚರ್ಚಿನೊಳಗೆ
ಕೇಸರಿ ಹಿಜಾಬ್‌ ಗೌನಿನೊಳಗೆ

ಕಾಣೆಯಾಗಿದ್ದಾನೆ ಮನುಷ್ಯ
ಕಣ್ಮರೆಯಾಗಿದೆ ಮನುಷ್ಯತ್ವ

ಜಾತಿ, ಮತ ಪಂಥದ ಕೆಳಗೆ
ದೇಶ ಭಾಷೆಯ ಗಡಿಯೊಳಗೆ
ವೇಷ ಭಾಷೆ ಲಿಂಗದೊಳಗೆ
ದ್ವೇಷ ಅಸೂಯೆ ಗಲಭೆಯೊಳಗೆ

ಕಾಣೆಯಾಗಿದ್ದಾನೆ ಮನುಷ್ಯ
ಕಣ್ಮರೆಯಾಗಿದೆ ಮನುಷ್ಯತ್ವ

ಬಡತನ ಸಿರಿತನದ ಅಂತಸ್ಥಿಕೆಯೊಳಗೆ
ಉಚ್ಛ ನೀಚತನದ ಸ್ಥಾನಮಾನದೊಳಗೆ
ಕಪ್ಪು ಬಿಳುಪಿನ ವರ್ಣದೊಳಗೆ
ಆಚಾರ ವಿಚಾರಗಳ ಅಂಧಕಾರದೊಳಗೆ

ಕಾಣೆಯಾಗಿದ್ದಾನೆ ಮನುಷ್ಯ
ಕಣ್ಮರೆಯಾಗಿದೆ ಮನುಷ್ಯತ್ವ
ಹುಡುಕಿಕೊಡುವಿರಾ ಮನುಷ್ಯನನ್ನು
ಕಲಿಯಬೇಕಿದೆ ಮನುಷ್ಯತ್ವವನ್ನು

-ಅನಾಮಿಕ

error: Content is protected !!