ವಿಜಯಪುರ

ಬರಡೋಲ ಯೋಧ ಝಾರ್ಖಂಡ್‌ನಲ್ಲಿ ನಿಧನ, ಐಆರ್‌ಬಿ ಹುದ್ದೆಗೆ ಸೇರಿದ್ದ ನಿವೃತ್ತ ಯೋಧ, ತರಬೇತಿ ವೇಳೆ ಹೃದಯಾಘಾತಕ್ಕೆ ಬಲಿ

ವಿಜಯಪುರ: ಚಡಚಣ ತಾಲೂಕಿನ ಬರಡೋಲ ಗ್ರಾಮದ ಐಆರ್‌ಬಿ ಪೊಲೀಸ್‌ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಜಕುಮಾರ ಲಕ್ಷ್ಮಣ ಗೋಟ್ಯಾಳ (42) ನಿಧನರಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ನಿವೃತ್ತಿ ಬಳಿಕ ಐಆರ್‌ಬಿ ಪೊಲೀಸ್‌ ಹುದ್ದೆಗೆ ಸೇರ್ಪಡೆಯಾಗಿದ್ದರು. ಹಾಲಿ ವಿಜಯಪುರದ ರಾಮದೇವನಗರದಲ್ಲಿ ವಾಸವಾಗಿದ್ದ ರಾಜಕುಮಾರ ಗೋಟ್ಯಾಳ ಇವರು ವಿಜಯಪುರ ಜಿಲ್ಲೆಯ ಐಆರ್‌ಬಿ ಪೊಲೀಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಝಾರ್ಖಂಡ್‌ಗೆ ಇಲಾಖೆ ವತಿಯಿಂದ ತರಬೇತಿಗೆ ತೆರಳಿದ್ದರು. ಬರುವ ಏಪ್ರೀಲ್‌ ಮೊದಲ ವಾರದಲ್ಲಿ ತರಬೇತಿ ಮುಕ್ತಾಯಗೊಳ್ಳಲಿದ್ದು ತವರಿಗೆ ವಾಪಸ್‌ ಆಗಲಿದ್ದರು. ಅಷ್ಟೊತ್ತಿಗಾಗಲೇ ತರಬೇತಿ ಸಮಯದಲ್ಲಿಯೇ ಶನಿವಾರ ಬೆಳಗ್ಗೆ 8ಕ್ಕೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ಮೃತ ರಾಜಾಕುಮಾರ ಇವರಿಗೆ ಪುತ್ರ, ಇಬ್ಬರು ಪುತ್ರಿಯರು ಹಾಗೂ ಪತ್ನಿ ಇದ್ದಾರೆ. ಭಾನುವಾರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

error: Content is protected !!