ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ : ಅರ್ಜಿ ಆಹ್ವಾನ
ಸರಕಾರ ನ್ಯೂಸ್ ವಿಜಯಪುರ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ 09 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಅವಶ್ಯಕತಾ ಕಿಟ್‍ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಿನಾಂಕ:29-05-2023 ರಿಂದ 02-06-2023ರವರೆಗೆ ಅರ್ಜಿಗಳನ್ನು ಆಯಾ ತಾಲ್ಲೂಕಿನ ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲಿ ಚಾಲ್ತಿಯಲ್ಲಿರುವ ನೋಂದಾಯಿತ ಕಾರ್ಮಿಕರ ಗುರುತಿನ ಚೀಟಿಯ ಪ್ರತಿ, ಕಾರ್ಮಿಕರ ಹಾಗೂ ಮಗುವಿನ ಆಧಾರ ಕಾರ್ಡ್ ಪ್ರತಿ, ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಭಾವಚಿತ್ರವಿರುವ ಮೂಲ ವ್ಯಾಸಂಗ ಪ್ರಮಾಣ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ 9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗದ ಪ್ರಮಾಣ ಪತ್ರ ದಾಖಲೆ ಸಹಿತ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿಗಳನ್ನು ಕಾರ್ಮಿಕ ನಿರೀಕ್ಷಕರ ಕಚೇರಿ, 1ನೇ ಮತ್ತು 2ನೇ ವೃತ್ತ ಕಲ್ಯಾಣ ಸಮುದಾಯ ಭವನ,ಸಿಂದಗಿ ನಾಕಾ, ವಿಜಯಪುರ, ಕಾರ್ಮಿಕ ನಿರೀಕ್ಷಕರ ಕಚೇರಿ, ಟಿಪ್ಪು ಸುಲ್ತಾನ ಸರ್ಕಲ್,ವಿಜಯಪುರ ರಸ್ತೆ ಇಂಡಿ, ಕಾರ್ಮಿಕ ನಿರೀಕ್ಷಕರ ಕಚೇರಿ, ಬಂದಾಳ ರಸ್ತೆ, ಪದ್ಮಾ ಗ್ಯಾಸ್ ಎದುರಗಡೆ, ಸಿಂದಗಿ, ಕಾರ್ಮಿಕ ನಿರೀಕ್ಷಕರ ಕಚೇರಿ, ವಿಮೋಚನಾ ಹೊಟೇಲ್ ಹಿಂಭಾಗ, ವೀರಭದ್ರೇಶ್ವರ ನಗರ ಎಪಿಎಂಸಿ ಎದುರುಗಡೆ ಬಸವನ ಬಾಗೇವಾಡಿ, ಕಾರ್ಮಿಕ ನಿರೀಕ್ಷಕರ ಕಚೇರಿ, ಮೋಟಗಿ ಪೆಟ್ರೋಲ್ ಬಂಕ್ ಹಿಂಭಾಗ,ಮುದ್ದೇಬಿಹಾಳ ಇಲ್ಲಿ ಸಲ್ಲಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.