ವಿಜಯಪುರ

ಗ್ರಾಮೀಣ-ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

ಸರಕಾರ ನ್ಯೂಸ್ ವಿಜಯಪುರ

ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮ ಪಂಚಾಯತ್, ಪಟ್ಟಣ್ಣ ಪಂಚಾಯತ್ ಪುರಸಭೆಗಳಲ್ಲಿ ಖಾಲಿ ಇರುವ ಗ್ರಾಮೀಣ ಹಾಗೂ ನಗರ ಪುನರ್‌ವಸತಿ ಕಾರ್ಯಕರ್ತರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ನೇಮಕಾತಿಗಾಗಿ (ಭಾಗಶ: ಅಂಧತ್ವ, ಭಾಗಶ: ಶ್ರವಣದೋಷ ಹಾಗೂ ದೈಹಿಕ ಅಂಗವಿಕಲತೆ) ಅಂಗವಿಕಲರಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಅಥವಾ ಅನುತ್ತೀರ್ಣದ ಪ್ರಮಾಣ ಪತ್ರ, ಅಂಗವಿಕಲತೆಯ ಗುರುತಿನ ಚೀಟಿ (ಯುಡಿಐಡಿ ಕಡ್ಡಾಯ), ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ತಹಸೀಲ್ದಾರ್‌ರಿಂದ ಪಡೆದ ರಹವಾಸಿ ಪ್ರಮಾಣ ಪತ್ರ, ಪಾಸ್-ಪೋರ್ಟ್ ಅಳತೆ ಭಾವಚಿತ್ರ, ಗಣಕಯಂತ್ರದ ಜ್ಞಾನ ಹೊಂದಿದ ಪ್ರಮಾಣ ಪತ್ರ ಹಾಗೂ ವಿಶೇಷ ಶಿಕ್ಷಣ, ಆರ್‌ಸಿಐ ತರಬೇತಿ, ದಿವ್ಯಾಂಗ ಮಿತ್ರ ತರಬೇತಿ, ಸನ್ಹೆ ಭಾಷೆ ತರಬೇತಿ, ದೈಹಿಕ ವ್ಯಾಯಮ ತರಬೇತಿಯ ವಿಶೇಷ ಜ್ಞಾನ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಮತ್ತು ಅರ್ಜಿ ಸಲ್ಲಿಸುವ ಅಂಗವಿಕಲರು ಸಂಬಂಧಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯವರಾಗಿರಬೇಕು.

ಮೇಲಿನ ದೃಢೀಕೃತ ದಾಖಲಾತಿಗಳೊಂದಿಗೆ 2023 ಜೂ. 16ರ ಸಾಯಂಕಾಲ 5ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹೊಸ ಜಿಪಂ ಆವರಣ, ಕನಕದಾಸ ಬಡಾವಣೆ, ವಿಜಯಪುರ ವಿಳಾಸಕ್ಕೆ ಖುದ್ದಾಗಿ ಸಲ್ಲಿಸತಕ್ಕದ್ದು. ಪೋಸ್ಟ್ ಮತ್ತು ಕೋರಿಯರ್ ಮುಖಾಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ನಿಗದಿತ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಷ್ಣು ಲ.ರಾಠೋಡ ಮೊ. 9169012233, ವಿಜಯಪುರ ರವಿ ರಾಠೋಡ ಮೊ. 9035553337, ಇಂಡಿ ಪರಶುರಾಮ ಭೋಸಲೆ ಮೊ. 9972441464, ಸಿಂದಗಿ ಮುತ್ತುರಾಜ ಸಾತಿಹಾಳ ಮೊ. 9980019635, ಬಸವನ ಬಾಗೇವಾಡಿ ಎಸ್.ಡಿ.ಬಿರಾದಾರ ಮೊ. 8722135660 ಹಾಗೂ ಮುದ್ದೇಹಾಳ ಎಸ್.ಕೆ. ಘಾಟಿ ಮೊ. 9740682979 ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!