ವಿಜಯಪುರ

ಫೇಸ್‌ಬುಕ್‌ನಲ್ಲಿ ಲವ್, ಲಾಡ್ಜ್‌ನಲ್ಲಿ ಮರ್ಡರ್, ಬ್ಯಾಗ್ ನಲ್ಲಿ ತಾಯಿ-ಮಗನ ಶವ ಹಾಕಿ ಬಾವಿಗೆ ಎಸೆದ ಕಿರಾತಕರು, ಸವಾಲಾಗಿ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಹೇಗೆ ಗೊತ್ತಾ?

ಸರಕಾರ‌ ನ್ಯೂಸ್ ವಿಜಯಪುರ

ಫೇಸ್‌ಬುಕ್‌ನಲ್ಲಿ ಶುರುವಾದ ಪ್ರೀತಿ ಕೊಲೆಯಲ್ಲಿ ಅಂತ್ಯ ಕಂಡ ರಣರೋಚಕ ಪ್ರಕರಣ ಭೇದಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ !

ಕಳೆದ 2023 ಮಾ 17 ರಂದು ರಾತ್ರಿ ತಿಕೋಟಾ ತಾಲೂಕಿನ ಸಿದ್ದಾಪುರ (ಎ) ಗ್ರಾಮದ ಚೆನ್ನಪ್ಪ ಗೋಪಾಲ ದಳವಾಯಿ ಎಂಬುವರ ಜಮೀನಿನಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದ್ದ ಎರಡು ಶವದ ಬ್ಯಾಗ್‌ಗಳ ಹಿಂದಿನ ರೋಚಕ ಕಹಾನಿ ಇದೀಗ ಬಯಲಾಗಿದೆ. ಕರಿ ಬಣ್ಣದ ಎರಡು ಬ್ಯಾಗ್‌ಗಳಲ್ಲಿದ್ದ ಶವದ ಬಗ್ಗೆ ಪೊಲೀಸರು ನಡೆಸಿದ ತನಿಖೆ ಬೆಚ್ಚಿಬೀಳಿಸುತ್ತದೆ.

ಅಂದಹಾಗೆ ಈ ಬ್ಯಾಗ್‌ಗಳು ಬಂದಿದ್ದು ಎಲ್ಲಿಂದ? ಕೊಲೆಯಾದವರು ಯಾರು? ಹೇಗಿತ್ತು ಪೊಲೀಸ್ ಕಾರ್ಯಾಚರಣೆ ? ಎಂಬುದನ್ನು ಹೇಳಿತೀವಿ ನೋಡಿ.

ಮೂಲತಃ ಮೈಸೂರಿನ ನಿವಾಸಿ ಸಾಗರ ಹೇಮಂತ ಲಮಾಣಿ ನಾಯಕ್ ವಿಜಯಪುರದ ಸಾಯಿ ಪಾರ್ಕ್‌ನಲ್ಲಿ ವಾಸವಾಗಿದ್ದು ಹೋಟಲ್ ವ್ಯಾಪಾರ ಮಾಡಿಕೊಂಡಿದ್ದಾನೆ. ಈತನಿಗೆ ಜಯ ಕರ್ನಾಟಕ ಕಾಲನಿಯ ಲಕ್ಷ್ಮಿಕಾಂತ ಶ್ರೀಶೈಲ ಕುಂಬಾರ ಎಂಬ ಸ್ನೇಹಿತನಿದ್ದಾನೆ. ಹೀಗೆ ಒಂದು ದಿನ ಸಾಗರಗೆ ಫೇಸ್‌ಬುಕ್‌ನಲ್ಲಿ ಶೃತಿ ಎಂಬ ಯುವತಿ ಪರಿಚಯವಾಗುತ್ತಾಳೆ. ಯುವತಿ ಎನ್ನುವುದಕ್ಕಿಂತ ಶೃತಿ ಗಹಿಣಿಯೆ ಸೇರಿ. ಏಕೆಂದರೆ ಆಕೆಗೊಬ್ಬ ಮಗನೂ ಇದ್ದನು.

ಒಂದು ದಿನ ಶೃತಿ ಇದಕ್ಕಿದ್ದಂತೆ ಕಾಣೆಯಾಗುತ್ತಾಳೆ. ಆಕೆಯ ತಂದೆ ಮೈಸೂರು ಜಿಲ್ಲೆಯ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಆದರೆ, ಆಕೆ 2023 ಮಾ.12 ರಂದು ರೈಲ್ವೆ ಮೂಲಕ ವಿಜಯಪುರಕ್ಕೆ ಬರುತ್ತಾಳೆ. ಸಾಗರ ಹಾಗೂ ಆತನ ಸ್ನೇಹಿತ ಲಕ್ಷ್ಮಿಕಾಂತ ಇಬ್ಬರೂ ಸೇರಿ ಆಕೆಯನ್ನು ಫೋರ್‌ವೇ ಲಾಡ್ಜ್‌ನಲ್ಲಿರಿಸುತ್ತಾರೆ. ಮಧ್ಯಾಹ್ನ ಸಾಗರ ಹಾಗೂ ಶೃತಿ ಮಧ್ಯೆ ಜಗಳವಾಗುತ್ತದೆ. ಕಾರಣ ಶೃತಿ ಬೇರೆಯವರೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿರುವುದು ಗೊತ್ತಾಗಿ ಸಾಗರ ಆಕೆಯನ್ನು ಕೊಲೆ ಮಾಡುತ್ತಾನೆ. ಬಳಿಕ ಈ ವಿಷಯ ಶೃತಿಯ ಮಗ ರೋಹನನ ಮೂಲಕ ಹೊರಬೀಳುವ ಸಾಧ್ಯತೆ ಪರಿಗಣಿಸಿ ಲಕ್ಷ್ಮಿಕಾಂತನ ಜೊತೆಗಿದ್ದ ರೋಹನನ್ನು ಲಾಡ್ಜ್‌ಗೆ ಕರೆಯಿಸಿ ಆತನನ್ನೂ ಕತ್ತು ಹಿಸುಕಿ ಕೊಲೆ ಮಾಡುತ್ತಾನೆ.

ಇಷ್ಟೆಲ್ಲಾ ಆದ ಬಳಿಕ ಸಾಗರ ಹಾಗೂ ಲಕ್ಷ್ಮಿಕಾಂತ ಜೊತೆಯಾಗಿ ಶೃತಿ ಹಾಗೂ ರೋಹನನ ಶವವನ್ನು ಟ್ಯಾಗ್ ಬ್ಯಾಗ್‌ಗಳಲ್ಲಿ ಹಾಕಿ, ಸ್ಕಾರ್ಪಿಯೋ ವಾಹನದಲ್ಲಿರಿಸಿ ಸಿದ್ದಾಪುರ ಗ್ರಾಮದ ಬಾವಿಯಲ್ಲಿ ಬೀಸಾಕಿರುತ್ತಾರೆ.

SP RUSHIKESH SONAVANE
SP RUSHIKESH SONAVANE

ವರ್ಷದ ಬಳಿಕ ಪತ್ತೆ

ಪ್ರಕರಣ ಭೇದಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗುತ್ತದೆ. ಎಸ್‌ಪಿ ಋಷಿಕೇಶ ಸೋನಾವಣೆ ಹಾಗೂ ಎಎಸ್‌ಪಿ ಶಂಕರ ಮಾರಿಹಾಳ ಮತ್ತು ಇನ್ನೋರ್ವ ಎಎಸ್‌ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಡಿ.ಎಚ್. ತಳಕಟ್ಟಿ ನೇತೃತ್ವ ವಿಶೇಷ ತಂಡ ರಚಿಸಲಾಗುತ್ತದೆ. ಪಿಐ ಸಂಜೀವ ಎಂ. ಕಾಂಬಳೆ, ಪ್ರೊಬೆಷನರಿ ಡಿಎಸ್‌ಪಿ ಮುರ್ತುಜ ಖಾದ್ರಿ, ಪಿಎಸ್‌ಐ ಬಸಗೌಡ ಎಸ್.ನೇರ್ಲಿ, ಎಸ್.ಕೆ. ಪತ್ತಾರೆ, ಎ.ಎ. ಪಟ್ಟಣಶೆಟ್ಟಿ, ಐ.ವೈ. ದಳವಾಯಿ, ಸಂತೋಷ ನಾಯಿಕ, ಅಲ್ಲಾಪಟೇಲ ಬಿರಾದಾರ, ಸುನೀಲ ರಾಠೋಡ, ಭಗವಂತ ಪವಾರ, ಬಾಷಾ ಬಾಗವಾನ ಅವರನ್ನೊಳಗೊಂಡ ತಂಡ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು ಸಾಹಸವೇ ಸರಿ. ತಂಡದ ಕಾರ್ಯವನ್ನು ಎಸ್‌ಪಿ ಋಷಿಕೇಶ ಸೋನಾವಣೆ ಮುಕ್ತವಾಗಿ ಶ್ಲಾಘಿಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!