ವಿಜಯಪುರ

ಸ್ಪಿರಿಟ್ ತುಂಬಿದ ಲಾರಿ ಪಲ್ಟಿ, ಆಗಸದೆತ್ತರಕ್ಕೆ ಚಿಮ್ಮಿದ ಬೆಂಕಿ ಜ್ವಾಲೆ, ಹೇಗಾಯಿತು? ಏನಾಯಿತು?

ಸರಕಾರ ನ್ಯೂಸ್ ಸಿಂದಗಿ

ಬಿಸಿಲೂರಿನಲ್ಲಿ ತಾಪಮಾನ ದಿನೇ ದಿನೇ ಏರಿಕೆಯಾಗುರ್ತಿದ್ದು, ನೆಲ ಕೆಂಡದ ಮೇಲಿನ ಕಾವಲಿಯಂತಾಗಿದೆ.

ಅಂಥದರಲ್ಲಿ ಸ್ಪಿರಿಟ್ ತುಂಬಿದ ಟ್ಯಾಂಕರ್ ಉರುಳಿ ಬಿದ್ದರೆ ಹೇಗಿರಬೇಡ? ನೀವೇ ಯೋಚಿಸಿ….

ಹೌದು, ಸಿಂದಗಿ ಪಟ್ಟಣದ ಬೈಪಾಸ್
ಬಳಿ ಸ್ಪಿರಿಟ್ ತುಂಬಿದ ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದೆ.

ಚಾಲಕನ‌ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಟ್ಯಾಂಕರ್ ಧಗಧಗಿಸುತ್ತಿದ್ದಂತೆ ಬೆಂಕಿ ಜ್ವಾಲೆ ಭುಗಿಲೆದ್ದಿದೆ.

ಫೇಸ್‌ಬುಕ್‌ನಲ್ಲಿ ಲವ್, ಲಾಡ್ಜ್‌ನಲ್ಲಿ ಮರ್ಡರ್, ಬ್ಯಾಗ್ ನಲ್ಲಿ ತಾಯಿ-ಮಗನ ಶವ ಹಾಕಿ ಬಾವಿಗೆ ಎಸೆದ ಕಿರಾತಕರು, ಸವಾಲಾಗಿ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಹೇಗೆ ಗೊತ್ತಾ?

ಟ್ಯಾಂಕರ್ ಉರುಳಿ ಬೀಳುತ್ತಲೇ ಚಾಲಕ ಕ್ಲೀನರ್ ಎಸ್ಕೇಪ್ ಆಗಿದ್ದಾರೆ.

ಬೆಂಕಿಯ ಕೆನ್ನಾಲಿಗೆ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಯ ಹರಸಾಹಸ ಪಡಬೇಕಾಯಿತು. ಸುದೀರ್ಘ ಕಾರ್ಯಾಚರಣೆ ಫಲವಾಗಿ ಬೆಂಕಿ ನಂದಿಸಲಾಯಿತಾದರೂ ಬಹುತೇಕ ವಾಹನ ಸುಟ್ಟು ಕರಕಲಾಗಿತ್ತು.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!