ವಿಜಯಪುರ

ಅಂತಾರಾಷ್ಟ್ರೀಯ ಸಂಘಟನೆ ಗಮನ ಸೆಳೆದ ನಾಯಕ, ಸಮಾಜ ಸೇವಕ ಗೋಡಕೆಗೆ ಸನ್ಮಾನ….!

ವಿಜಯಪುರ: ಸಮಾಜ ಸೇವಕ, ಯುವ ನಾಯಕರ, ರಾಜಕೀಯ ನೇತಾರ ರೇವಣಸಿದ್ಧ ಗೋಡಕೆ ಇವರಿಗೆ ಅಂತರಾಷ್ಟ್ರೀಯ ಮಟ್ಟದ  ಸಂಘಟನೆಯೊಂದು ಸನ್ಮಾನಿಸಿ ಗೌರವಿಸಿದೆ.

ಕರೊನಾ ಸಂದರ್ಭದಲ್ಲಿ ಆನ್‌ಲೈನ್‌ ಕಾರ್ಯಕ್ರಮಗಳ ಮೂಲಕ ಜಗತ್ತಿನಾದ್ಯಂತ ನೆಲೆಸಿರವ ಅನಿವಾಸಿ ಕನ್ನಡಿಗರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಮಟ್ಟದ  ಸಂಘಟನೆಯಾದ ಸಾಗರೋತ್ತರ ಕನ್ನಡಿಗರು ಸಂಘಟನೆಯ ಜಂಟಿ ಕಾರ್ಯದರ್ಶಿಗಳಾದ ಸೌಧಿ ಅರೇಬಿಯಾದಲ್ಲಿ ನೆಲೆಸಿರುವ ಮೈಸೂರಿನ ಶ್ರೀಯುತ ರವಿ ಮಹದೇವರವರು ರೇವಣಸಿದ್ದ ಗೋಡಕೆ ಅವರ ಸೇವೆ ಗುರುತಿಸಿ ಸನ್ಮಾನಿಸಿದ್ದಾರೆ.

ಗೋಡಕೆ ಅವರ ಶೈಕ್ಷಣಿಕ ಸಮಾಜ ಸೇವೆಯನ್ನು ಗುರುತಿಸಿ ವಿಜಯಪುರ ನಗರಕ್ಕೆ ಕುಟುಂಬ ಸಮೇತ ಆಗಮಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದ್ದು ವಿಶೇಷ ಸಂಗತಿ.

ಈ ಸಂದರ್ಭದಲ್ಲಿ ಶ್ರೀಮತಿ ಶಿಲ್ಪಾ ರವಿ, ಸಾಗರೋತ್ತರ ಕನ್ನಡಿಗರು ಬರಹಗಾರರಾದ  ದೇವೆಂದ್ರ ಒಡೆಯರ್ ರವರರು ಉಪಸ್ಥಿತರಿದ್ದರು.

 

error: Content is protected !!