ರೈತನಿಂದ ಲಂಚ ಸ್ವೀಕಾರ, ಸರ್ವೆಯರ್ ಲೋಕಾ ಬಲೆಗೆ
ಸರಕಾರ್ ನ್ಯೂಸ್ ಸಿಂದಗಿ
ಜಮೀನಿನ ತಾತ್ಕಾಲಿಕ ಫೋಡಿ ಮಾಡಿಸಲು ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಸಿಂದಗಿ ತಾಲೂಕಿನ ಸರ್ವೇಯರ್
ಸುರೇಶ ಮಾಳಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆಲಮೇಲ ಪಟ್ಟಣದ ರೈತನಿಂದ 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಜಮೀನಿನ ತಾತ್ಕಾಲಿಕ ಪೋಡಿ ಮಾಡಿಸಲು ರೈತರನಿಂದ 28 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸುರೇಶ ಮಾಳಿ ಮುಂಗಡವಾಗಿ 18 ಸಾವಿರ ಹಣ ಪಡೆದಿದ್ದ. ಮಂಗಳವಾರ 10 ಸಾವಿರ ರೂಪಾಯಿ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ.
ಲೋಕಾಯುಕ್ತ ಎಸ್ ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಡಿವೈಎಸ್ ಪು ಅರುಣ ನಾಯಕ, ಇನ್ಸಪೆಕ್ಟರ್ ಆನಂದ ಠಕ್ಕಣ್ಣನವರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.