ಮಕ್ಕಳಾಗುವ ಔಷಧ ಕೊಡುತ್ತೇನೆಂದರು, ಮನೆಗೆ ಬಂದು ಮಾಡಿದ್ದೇನು ಗೊತ್ತಾ?
ಸರಕಾರ ನ್ಯೂಸ್ ಬಸವನಬಾಗೇವಾಡಿ
ಮಕ್ಕಳಾಗದವರಿಗೆ ಮಕ್ಕಳಾಗುವ ಔಷಧ ಕೊಡುವುದಾಗಿ ಮನೆ ಮನೆಗೆ ಬರುವವರ ಬಗ್ಗೆ ಸ್ವಲ್ಪ ಹುಷಾರ್ ಆಗಿರಿ !!!!
ಹೌದು, ಹೀಗೆ ಔಷಧ ಕೊಡುತ್ತೇನೆಂದು ಮನೆಗೆ ಬಂದವರನ್ನು ಮನೆಯೊಳಗೆ ಬಿಟ್ಟುಕೊಂಡ ದಂಪತಿ ಇದೀಗ ಪಶ್ಚಾತಾಪ ಪಡುತ್ತಿದ್ದಾರೆ. ಏಕಾದರೂ ಮನೆಯೊಳಗೆ ಬಿಟ್ಟುಕೊಂಡೆವೋ ಎಂದು ಪರಿತಪಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ವಿಚಿತ್ರ ಪ್ರಕರಣ:
ಬ.ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಒಕ್ಕಲುತನ ಮಾಡಿಕೊಂಡಿರುವ ಮಹಿಬೂಬ ಆಯುಬಖಾನ ಮುಲ್ಲಾ ತನ್ನ ಮೂರು ಜನ ಅಣ್ಣ- ತಮ್ಮಂದಿರೊಂದಿಗೆ ಒಕ್ಕಲುತನ ಮಾಡಿಕೊಂಡಿದ್ದಾರೆ.
ಮದುವೆಯಾಗಿ 8 ವರ್ಷ ಆಗಿದ್ದು ಇನ್ನೂವರೆಗೆ ಮಕ್ಕಳಾಗಿಲ್ಲಾ. ಇದರಿಂದ ಬೇರೆ ಬೇರೆ ಕಡೆಗಳಲ್ಲಿ, ಖಾಸಗಿಯಾಗಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೂ ಪ್ರಯೋಜನವಾಗಿಲ್ಲ.
ಪರಿಸ್ಥಿತಿ ಹೀಗಿರುವಾಗ ಊರಿನಲ್ಲಿ ಇಬ್ಬರು ವ್ಯಕ್ತಿಗಳು ಸಿದ್ಧಗಂಗಾ ಹಾಸ್ಪಿಟಲ್ ಅಂತಾ ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ಬಂದು ಮಕ್ಕಳಾಗಲಾರದವರಿಗೂ ಔಷಧಿ ನೀಡಿ ಮಕ್ಕಳಾಗುವಂತೆ ಮಾಡುತ್ತೇವೆ ಅಂತಾ ತಿರುಗಾಡುತ್ತಿದ್ದರು.
ಅವರು ಮಹಿಬೂಬನನ್ನು ಸಂಪರ್ಕಿಸಿ ನನಗೆ ತಾಳಿಕೋಟೆಯಲಿ ತಮ್ಮದೊಂದು ಆಸ್ಪತ್ರೆಯಿದ್ದು ತಿಂಗಳು ತಿಂಗಳು ಒಬ್ಬರು ಮೆಡಮ್ ಬಂದು ನಿಮಗೆ ಚೆಕ್ ಮಾಡಿ ಔಷಧ ನೀಡುತ್ತಾರೆ ಆಗ ನಿಮಗೆ ಮಕ್ಕಳಾಗುತ್ತವೆ ಅಂತಾ ಹೇಳಿದ್ದರಿಂದ ಅವರ ಮಾತು ನಂಬಿದ ಮಹಿಬೂಬ ಔಷಧಿಯನ್ನು ಪಡೆದುಕೊಳ್ಳಲು ಒಪ್ಪಿದ್ದಾರೆ.
ಬಳಿಕ ಅವರು ಮಹಿಬೂಬ ಮನೆಗೆ ಬಂದು ಚೆಕ್ ಮಾಡಿ ಔಷಧಿಯನ್ನು ನೀಡುತ್ತೇವೆ ಅಂತಾ ಹೇಳಿದ್ದಾರೆ. ಮನೆ ಒಳಗೆ ಕುಂತು ಚೆಕ್ ಮಾಡಬೇಕು ಅಂದಿದ್ದರಿಂದ ಮಹಿಬೂಬ ಅವರನ್ನು ಮನೆಯಲ್ಲಿ ಕರೆದುಕೊಂಡು ಕುಂತಿದ್ದಾಗ ಅವರು ಚೆಕ್ ಮಾಡಿ ಔಷಧಿಯನ್ನು ನೀಡುತ್ತೇವೆ ಅದಕ್ಕೆ ನೀವು ನಮಗೆ 25,000/- ರೂಗಳನ್ನು ನೀಡಬೇಕು ಅಂದಾಗ ಮಹಿಬೂಬ ತನ್ನ ತಮ್ಮನಾದ ಅಜರುದ್ದೀನ್ ಈತನಿಗೆ ಪೋನ್ ಮಾಡಿ ದುಡ್ಡಿನ ಬಗ್ಗೆ ಹೇಳಿದ್ದಾರೆ. ಆತ 25000/ – ರೂಗಳನ್ನು ಒಮ್ಮೆಲೆ ಕೊಡುವುದು ಬೇಡ ಈಗ 11000/- ರೂಗಳನ್ನು ಕೊಡೋಣ ಅಂತಾ ಹೇಳಿದ್ದಾನೆ. ಆಗ ಅವರು 9036344967 ನಂಬರಗೆ ಪೋನ್ ಪೇ ಮುಖಾಂತರ ದುಡ್ಡು ಹಾಕಿಸಿಕೊಂಡರು. ನಂತರ ಅವರು ಈಗ ಈ ಔಷಧಿಯನ್ನು ತೆಗೆದುಕೊಳ್ಳಿರಿ ನಂತರ ನಾವು 15 ದಿವಸಗಳ ನಂತರ ವಾಪಸ್ಸು ಮೆಡಮ್ಮರಿಗೆ ಕರೆದುಕೊಂಡು ಬರುತ್ತೇವೆ ಅಂತಾ ಹೇಳಿ ಹೋಗಿದ್ದಾರೆ.
ಮನೆಯಲ್ಲಿದ್ದಾಗಲೇ ನಡೆದಿತ್ತಾ ಕರಾಮತ್ತು?
ಇಷ್ಟೆ ಲ್ಲ ಆದ ಬಳಿಕ ಮಹಿಬೂಬ ತಾಯಿ ಹುಸನಬಿ ಇವರು ಊರಿಗೆ ಹೋಗುವ ಸಲುವಾಗಿ ಮನೆಯಲ್ಲಿ ಇಟ್ಟಿದ್ದ 1 ತೊಲೆಯ ಬಂಗಾರದ ಬೋರಮಾಳ ಅಂದಾಜು 70000 ರೂಪಾಯಿ ಹಾಗೂ 1 ತೊಲೆಯ ಬಂಗಾರದ ಮೆಲಗುಂಡ ಅಂದಾಜು 70000 ರೂ. ಮೌಲ್ಯದ್ದನ್ನು ಇವುಗಳನ್ನು ಹಾಕಿಕೊಳ್ಳಲು ಹೋದಾಗ ಅವು ಇರಲಿಲ್ಲ. ಆಗ ಮೆಹಬೂಬ ಹಾಗೂ ತಮ್ಮನಾದ ಅಜರುದ್ದೀನ್ ಔಷಧಿ ಕೊಡಲು ಬಂದವರ ಮೇಲೆ ಸಂಶಯ ಬಂದು ಅವರ ಮೊ.ನಂ: 9964490591 ಹಾಗೂ 6303555277 ಈ ನಂಬರಿಗೆ ಪೋನ್ ಮಾಡಿ ಅವರಿಗೆ ವಿಚಾರಿಸಿದಾಗ ಅವರು ನಾವು ಈಗ ಬೇರೆ ಊರಿಗೆ ಔಷಧಿ ಕೊಡಲು ಹೋಗುತ್ತಿದ್ದೇವೆ ಅಂತಾ ಹೇಳಿ ಪೋನ್ ಕಾಲ್ ಕಟ್ ಮಾಡಿದ್ದಾರೆ.
ನಂತರ ವಾಪಸ್ಸು ಪೋನ್ ಮಾಡಿದಾಗ ಅವರ ಪೋನ್ ಸ್ವಿಚ್ ಆಫ್ ಅಂತಾ ಬಂದಿದೆ. ಹೀಗಾಗಿ ಆ ಅಪರಿಚಿತರೇ ಕಳ್ಳತನ ಮಾಡಿರುವ ಸಂಶಯದಿಂದ ಮಹಿಬೂಬ ಬಸವನಬಾಗೇವಾಡಿ ಠಾಣೆಗೆ ದೂರು ನೀಡಿದ್ದಾರೆ.
ಆದ್ದರಿಂದ ಹೀಗೆ ಯಾವುದೋ ನೆಪದಲ್ಲಿ ಮನೆಗೆ ಬರುವವರ ಬಗ್ಗೆ ಹುಷಾರ್ ಆಗಿರಿ. ಸಂಶಯ ಬಂದಲ್ಲಿ ಹತ್ತಿರದ ಠಾಣೆಗೆ ದೂರು ಸಲ್ಲಿಸಿ.