ಅಕ್ರಮ ಮರಳು ಸಾಗಾಟ, ಪೊಲೀಸ್ ದಾಳಿಯಲ್ಲಿ ಸಿಕ್ಕ ಮರಳೆಷ್ಟು?
ಸರಕಾರ್ ನ್ಯೂಸ್ ಮುದ್ದೇಬಿಹಾಳ
ಮರಳು ಗಣಿಗಾರಿಕೆ ಸ್ಥಗಿತಗೊಂಡಿದ್ದರೂ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುವ ಪ್ರಕರಣ ವ್ಯಾಪಕವಾಗಿ ಕಂಡು ಬರುತ್ತಿದ್ದು, ತಾಳಿಕೋಟೆ ಪೊಲೀಸರು ಅಂಥ ಟಿಪ್ಪರ್ ಹಿಡಿದು ಮರಳು ವಶಕ್ಕೆ ಪಡೆದಿದ್ದಾರೆ.
ಜ. 12ರಂದು ಬ.ಸಾಲೋಡಗಿ ಬಳಿ ಗಸ್ತು ತಿರುಗುತ್ತಿದ್ದಾಗ ಬಿಳಿಬಾಯಿ ಕ್ರಾಸ್ ಹತ್ತಿರ ಹುಣಸಗಿ ಕಡೆಯಿಂದ ತಾಳಿಕೋಟಿ ಕಡೆಗೆ ಒಂದು ಟಿಪ್ಪರ್ ಬರುತ್ತಿತ್ತು. ಅದನ್ನು ನಿಲ್ಲಿಸಿ ನೋಡಲಾಗಿ ಮರಳು ತುಂಬಿತ್ತು. ಆಗ ಟಿಪ್ಪರ್ ಚಾಲಕನನ್ನು ವಿಚಾರಿಸಲಾಗಿ ಸರಕಾರದಿಂದ ರಾಯಲ್ಟಿ ಕಟ್ಟದೇ ಅಕ್ರಮವಾಗಿ ತೆಗೆದುಕೊಂಡು ಹೊರಟಿರುವುದು ಕಂಡು ಬಂದಿದೆ. ಚಾಲಕನ ಹೆಸರು ರಮೇಶ ಕೃಷ್ಣಪ್ಪ ವಡ್ಡರ್ ಎಂದು ತಿಳಿದು ಬಂದಿದೆ.
ಬಳಿಕ ಟಿಪ್ಪರ್ ವಶಕ್ಕೆ ಪಡೆದಿದ್ದು ಅದರಲ್ಲಿದ್ದ 5 ಬ್ರಾಸ್ ಮರಳು ಸಹ ವಶಕ್ಕೆ ಪಡೆದಿದ್ದಾರೆ. ಮರಳಿನ ಮೌಲ್ಯ 20 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಟಿಪ್ಪರ್ ಮೌಲ್ಯ 15 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)