ರಿಚ್ ಕಿಂಗ್ ಅನ್ನೋ ವ್ಯಕ್ತಿ ಪರಿಚಯವಾದ, 10 ಸಾವಿರಕ್ಕೆ ಲಕ್ಷ ರೂಪಾಯಿ ಕೊಡುತ್ತೇನೆಂದ, ಲಕ್ಷ ರೂಪಾಯಿ ಕೊಟ್ಟ ಭೂಪ, ಕೊನೆಗೇನಾಯಿತು?
ಸರಕಾರ್ ನ್ಯೂಸ್ ಚಿಕ್ಕಬಳ್ಳಾಪುರ
ಜಗತ್ತಿನಲ್ಲಿ ಹೇಗೆಲ್ಲಾ ಜನ ಯಾಮಾರುತ್ತಾರೆ ಮತ್ತು ಯಾಮಾರಿಸುತ್ತಾರೆ ಎಂಬುದಕ್ಕೆ ಇಲ್ಲಿನ ಮೋಸದ ಪ್ರಕರಣವೇ ಸಾಕ್ಷಿ…..!
ಹೌದು, ಟೆಲಿಗ್ರಾಮ್ ಖಾತೆಯಲ್ಲಿ ಬಂದ “ಟೇಕ್ ಮನಿ ನಾಟ್ ಸ್ಕ್ಯಾಮ್” ಎಂಬ ಸ್ಕ್ರೀನ್ ಶಾಟ್ ನೋಡಿ ಅದನ್ನು ಕ್ರಿಯೇಟ್ ಮಾಡಿದ “ರಿಚ್ ಕಿಂಗ್” ಎಂಬ ವ್ಯಕ್ತಿಯನ್ನು ನಂಬಿ ಇಲ್ಲೋರ್ವ ವ್ಯಕ್ತಿ ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಕಾನಗಮಾಕಲಪಲ್ಲಿಯ ಚೌಡರೆಡ್ಡಿ ಕೆಎಸ್‌ಬಿನ್ ಶ್ರೀನಿವಾಸ ಎಂಬುವರು ಮೋಸಕ್ಕೆ ಒಳಗಾದ ಕಥೆಯೇ ರೋಚಕ.
ಹೀಗೆ ಟೆಲಿಗ್ರಾಮ್ ನೋಡುತ್ತಿದ್ದಾಗ ಪರಿಚಯವಾದ ಈ ರಿಚ್ ಕಿಂಗ್ ಚಾಟ್ ಮೂಲಕ 10 ಸಾವಿರ ಇನ್ವೆಸ್ಟ್ ಮಾಡಿದರೆ 1 ಲಕ್ಷ ರೂಪಾಯಿ ಕೊಡುತ್ತೇನೆಂದು ಹೇಳಿದ್ದಾನೆ. ಅದನ್ನೇ ನಂಬಿದ ಕೆಎಸ್‌ಬಿನ್ ಶ್ರೀನಿವಾಸ 10 ಸಾವಿರ ರೂಪಾಯಿ ಯುಪಿಐ ಮೂಲಕ ಹಾಕಿದ್ದಾನೆ. ಮೂರ್ನಾಲ್ಕು ಗಂಟೆಯಲ್ಲಿ ಲಕ್ಷ ರೂಪಾಯಿ ಹಾಕುತ್ತೇನೆಂದವನು ಹಾಕಲೇ ಇಲ್ಲ. ಬಳಿಕ ವಿಚಾರಿಸಲಾಗಿ ರಾಂಗ್ ಪೇಮೆಂಟ್ ಆಗಿದ ಎನ್ನಲಾಗಿ ಮ ತ್ತೆ 21800 ರೂಪಾಯಿ ಹಾಕಿದ್ದಾನೆ. ಮತ್ತೆ ರಾಂಗ್ ಪೇಮೆಂಟ್ ಎಂದಿದ್ದು ಈತ ಮತ್ತೆ 25 ಸಾವಿರ ರೂಪಾಯಿ ಹಾಕಿದ್ದು ಒಟ್ಟು 105000 ರೂಪಾಯಿ ಹಾಕಿದ್ದಾನೆ. ಬಳಿಕ ಯಾವುದೇ ಹಣ ವಾಪಸ್ ಮಾಡದ ಹಿನ್ನೆಲೆ ಇದೀಗ ಅಂದರೆ ಜ.12ರಂದು ಮೋಸ ಹೋದ ವ್ಯಕ್ತಿ ಚಿಕ್ಕಬಳ್ಳಾಪುರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ದಿನೇ ದಿನೇ ಇಂಥ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಸೈಬರ್ ಠಾಣೆ ಎಷ್ಟೇ ಜಾಗೃತಿ ಮೂಡಿಸಿದರೂ ಫಲ ಕೊಡುತ್ತಿಲ್ಲ. ಹೀಗಾಗಿ ಈ ವರದಿಯಿಂದ ಜಾಗೃತಿಗೊಳ್ಳಿ, ನಿಮ್ಮವರನ್ನೂ ಜಾಗೃತಿಗೊಳಿಸಿ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)