ಚಿಕ್ಕಬಳ್ಳಾಪುರ

ಲೋನ್‌ ಆಸೆಗೆ ಡಿಟೇಲ್ಸ್‌ ಕೊಟ್ಟ ಯುವತಿ, ಅಶ್ಲೀಲ್‌ ಫೋಟೊ ಹಾಕಿ ಬ್ಲಾಕ್‌ಮೇಲ್‌, ಮಾನಕ್ಕಂಜಿ 8 ಲಕ್ಷಕ್ಕೂ ಅಧಿಕ ಹಣ ಕೊಟ್ಟ ಅಮಾಯಕಿ !

ಸರಕಾರ ನ್ಯೂಸ್‌ ಚಿಕ್ಕಬಳ್ಳಾಪುರ

ನಿಮಗೆ ಹಣಕಾಸಿನ ಅಡಚಣೆ ಇದೆಯಾ? ಲೋನ್‌ಗಾಗಿ ಕಾತರಿಸುತ್ತಿದ್ದೀರಾ? ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಕಲೆ ಹಾಕುವ ಮುನ್ನ ಎಚ್ಚರ…..! ಹಾಗೊಂದು ವೇಳೆ ಮಾಹಿತಿ ಕಲೆ ಹಾಕಿದರೂ ಯಾವುದೇ ಆಸೆ ಆಮಿಷಕ್ಕೆ ಒಳಗಾಗಿ ನಿಮ್ಮ ವೈಯಕ್ತಿಕ ಮಾಹಿತಿ ಬಿಟ್ಟುಕೊಡದಿರಿ.

ಹೌದು,,,,ಹೀಗೆ ಲೋನ್‌ ಆಸೆಯಿಂದಾಗಿ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿ ದಾಖಲಿಸಿ ಆಪ್‌ ಗಳನ್ನು ಡೌನ್‌ಲೋಡ್‌ ಮಾಡಿಕೊಂಡ ಪರಿಣಾಮ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಅಂದ ಹಾಗೆ ಹಣ ಕಳೆದುಕೊಂಡ ವ್ಯಕ್ತಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಬಂಡಕಿಂದಪಲ್ಲಿ ಗ್ರಾಮ ದ ನಿವಾಸಿ ಮೌನಿಕಾ ಟಿವಿ ಬಿನ್‌ ವೆಂಕಟರಾವಣ ಟಿ (24) ಎಂಬುವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕುಮಾರಿ ಮೌನಿಕ ಲೋನ್‌ಗಾಗಿ ಗೂಗಲ್‌ ಸರ್ಚ್‌ ಕೊಟ್ಟಿದ್ದಾರೆ. ಅದರಲ್ಲಿ ಕೆಲವು ಆಪ್‌ಗಳು ಬಂದಿದ್ದು ಡೌನ್‌ಲೋಡ್‌ ಕೊಟ್ಟಿದ್ದಾರೆ. ಬಳಿಕ ಕೆಲವು ಮಾಹಿತಿ ಕೇಳಲಾಗಿ “ಅಲಾವ್”‌ ಆಪ್ಶನ್‌ ಪ್ರೆಸ್‌ ಮಾಡುತ್ತಾ ಹೋಗಿದ್ದಾರೆ. ಕೊನೆಗೆ ಆಧಾರ್‌, ಪ್ಯಾನ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಡಿಟೇಲ್ಸ್‌ ಸಹ ಬಿಟ್ಟುಕೊಟ್ಟಿದ್ದು, ಇದನ್ನು ದುರುಪಯೋಗ ಪಡೆಸಿಕೊಂಡ ಕೆಲವು ಸೈಬರ್‌ ಕಳ್ಳರು ಆರಂಭದಲ್ಲಿ 2400 ರೂ. ಲೋನ್‌ ನೀಡಿದ್ದಾರೆ. ನಂತರ ಆರು ದಿನಗಳಲ್ಲಿ ಮೌನಿಕ ಅದನ್ನು ಬಡ್ಡಿ ಸಮೇತ ಸಂದಾಯ ಮಾಡಿದ್ದಾರೆ.

ಹೆಚ್ಚಿನ ಹಣಕ್ಕಾಗಿ ಬ್ಯ್ಲಾಕ್‌ ಮೇಲ್‌:

ಲೋನ್‌ಗಾಗಿ ಹಲವು ಆಪ್‌ ಡೌನ್‌ಲೋಡ್‌ ಮಾಡಿದರೂ ಉಳಿಕೆ ಹಣ ಬರದಿದ್ದರೂ ಲೋನ್‌ ಹಣ ಕಟ್ಟುವಂತೆ ಮೋನಿಕ್‌ಗೆ ಕರೆಗಳು ಬಂದಿವೆ. ಹಣ ಕಟ್ಟದೇ ಹೋದರೆ ನಿನ್ನ ಫೋಟೊ ಎಡಿಟ್‌ ಮಾಡಿ ಕೆಟ್ಟದಾಗಿ ಚಿತ್ರಿಸಿ ಪೋಸ್ಟ್‌ ಮಾಡುವ ಬೆದರಿಕೆ ಹಾಕಿದ್ದಾರೆ. ಬೇರೆ ಹುಡುಗನೊಂದಿಗೆ ಮೋನಿಕ್‌ ಫೋಟೊ ಅಶ್ಲೀಲವಾಗಿ ಜೋಡಿ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಪೋಸ್ಟ್‌ ಮಾಡಿದ್ದಾರೆ. ಇದರಿಂದ ಮಾನಕ್ಕೆ ಅಂಜಿದ ಮೋನಿಕ್‌ ಕೇಳಿದಂತೆ ಹಣ ಹಾಕುತ್ತಾ ಬಂದಿದ್ದಾರೆ. ಒಟ್ಟು 1.50 ರೂ.ಆನ್‌ಲೈನ್‌ ಲೋನ್‌ ಪಡೆದಿರುವ ಮೋನಿಕ್‌ ಅದಕ್ಕೆ 7 ದಿನದಲ್ಲಿ ಬಡ್ಡಿ ಸಮೇತ ಹಣ ಕಟ್ಟಿದ್ದಾರೆ. ಪುನಃ ಬ್ಯ್ಲಾಕ್‌ ಮೇಲ್‌ ಮಾಡುತ್ತಾ ಬಂದಿದ್ದರಿಂದ ಒಟ್ಟು 8,07,544 ರೂಪಾಯಿಯನ್ನು ಆನ್‌ಲೈನ್‌ ಮೂಲಕ ಪಡೆದು ವಂಚಿಸಿದ್ದಾರೆ. ಇಷ್ಟಕ್ಕೆ ಬಿಡದ ಕಿರಾತರಕು ಮತ್ತೆ ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ಬೇಸತ್ತು ಮಾನಿಸಿಕವಾಗಿ ನೊಂದ ಮೋನಿಕ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!