ನಮ್ಮ ವಿಜಯಪುರ

ಯತ್ನಾಳರನ್ನು ಹಣಿಯಲು ಮುಧೋಳದಿಂದ ಸಹಾಯಹಸ್ತ ! ಕುತಂತ್ರ ಹೆಣೆದವರು ಯಾರು?

ಸರಕಾರ್ ನ್ಯೂಸ್ ವಿಜಯಪುರ

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯತ್ನಾಳರ ವರ್ಚಸ್ಸು ತಗ್ಗಿಸಲು ಕುತಂತ್ರ ನಡೆದಿತ್ತಾ?

ಚುನಾವಣೆ ಫಲಿತಾಂಶ ಹೊರಬಿದ್ದು ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇದೀಗ ಇಂಥದ್ದೊಂದು ಅನುಮಾನ ಖುದ್ದು ಶಾಸಕ ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆಯಿಂದಲೇ ವ್ಯಕ್ತವಾಗಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ಯತ್ನಾಳ, ಪಾಲಿಕೆ ಚುನಾವಣೆಯಲ್ಲಿ ನನ್ನನ್ನು ಹಣಿಯಲು ಕಳ್ಳರ ಗ್ಯಾಂಗ್ ಮನೆಯಲ್ಲಿಯೇ ಕುಳಿತು ತಂತ್ರ ಮಾಡಿದ್ದಾರೆ. ಮಾತ್ರವಲ್ಲ, ಮುಧೋಳ ಮತ್ತು ಬೆಂಗಳೂರಿನಿಂದಲೂ ಬಂದಿದ್ದರೆಂದು ಬಾಂಬ್ ಸಿಡಿಸಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಈ ಹಿಂದೆ ಯಾವ ಪಕ್ಷಕ್ಕೂ 17 ಸ್ಥಾನ ಬಂದಿರಲಿಲ್ಲ. ಇದೀಗ ಹೆಚ್ಚು ಸ್ಥಾನ ಬಂದಿದ್ದು ನೋಡಿದರೆ ಜನ ಅಭಿವೃದ್ಧಿ ಮತ್ತು ಹಿಂದುತ್ವನ್ನು ಒಪ್ಪಿಕೊಂಡಿದ್ದಾರೆ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಈಗಾಗಲೇ ಪಕ್ಷೇತರರ ಪೈಕಿ ಓರ್ವ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಇನ್ನೂ ಇಬ್ಬರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಯಾರದೇ ಹಂಗಿಲ್ಲದೇ ಮೇಯರ್-ಉಪಮೇಯರ್ ಮಾಡುತ್ತೇವೆ. ಈ ಗೆಲವು ರಾಜ್ಯದ ರಾಜಕಾರಣದಲ್ಲಿ ಪ್ರಭಾವ ಬೀರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುತ್ತದೆ ಎಂದರು.

ಇನ್ನು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ವರ್ಚಸ್ಸು ತಗ್ಗಿಸಲು ಮನೆಯಲ್ಲಿಯೇ ಕುಳಿತು ಕುತಂತ್ರ ನಡೆಸಿದ ಗ್ಯಾಂಗ್ ಇನ್ಮುಂದೆ ಮನೆಯಲ್ಲಿಯೇ ಕುಳಿತಿರಲಿ. ಜನ ಅವರಿಗೆ ಬುದ್ದಿ ಕಲಿಸಿದ್ದಾರೆ ಎಂದ ಯತ್ನಾಳ, ಬೆಂಗಳೂರು, ಮುಧೋಳದಿಂದ ಯತ್ನಾಳ ಮುಗಿಸಲು ಬಂದಿದ್ದರು. ಬೆಂಗಳೂರು, ಮುಧೋಳದಿಂದ ಸಹಾಯ ಹಸ್ತ (ಹಣ) ಕೂಡ ಬಂದಿತ್ತು. ಆದರೆ, ಜನ ಹುಚ್ಚರಲ್ಲ ಎಂದಿರುವುದು ಕುತೂಹಲ ಹುಟ್ಟಿಸಿದೆ.

error: Content is protected !!