ನಮ್ಮ ವಿಜಯಪುರ

ಮಾರಣಾಂತಿಕ ಹಲ್ಲೆ ನಡೆಸಿದ್ದ 10 ಜನರಿಗೆ ಜೀವಾವಧಿ ಶಿಕ್ಷೆ !

ಸರಕಾರ್‌ ನ್ಯೂಸ್ ವಿಜಯಪುರ

ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ 10 ಅಪರಾಧಿಗಳಿಗೆ ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.

ವಿಜಯಕುಮಾರ ಮಲ್ಲಪ್ಪ ಡೋಣಿ, ಶಾಂತಕುಮಾರ ಮಲ್ಲಪ್ಪ ಡೋಣಿ, ಸಬನಗೌಡ ದೊಡ್ಡನಗೌಡ ಪಾಟೀಲ, ಉಮೇಶ ಮಂದಣ್ಣ ಗೌಡರ, ಕಲ್ಲಪ್ಪ ಬಸಲಿಂಗಪ್ಪ ಕಲ್ಬುರ್ಗಿ, ಸಂಗಮೇಶ ಅರ್ಜುನ ಬಿಲ್ಲೂರ, ಶಾಂತವೀರ ನಿಂಗೊಂಡ ಯರನಾಳ, ಸುರೇಶ ಅಣ್ಣಪ್ಪ ಪೂಜಾರಿ, ಮುದಕಪ್ಪ ದುಂಡಪ್ಪ ಹಾವಡಿ, ಸಂತೋಷ ಶಂಕರಗೌಡ ಪಾಟೀಲ ಶಿಕ್ಷೆಗೆ ಗುರಿಯಾಗಿದ್ದಾರೆ.

ನಗರದ ಮಧುವನ ಹೋಟೆಲ್ ಬಳಿಯ ವಿಠಲ ಶಾಂತಪ್ಪ ಬಿರಾದಾರ ಎಂಬುವವರ ಮನೆ ಮುಂದೆ 2014 ಮೇ 8 ರಂದು ಆರೋಪಿಗಳೆಲ್ಲರೂ ಸೇರಿ ತಂಟೆ ತಕರಾರು ಮಾಡಿದ್ದರು. ವಿಠಲನ ಮನೆಯ ತಡೆಗೋಡೆ ಕೆಡವಿದ್ದರು. ರಾಡ್ ಮತ್ತು ಕಲ್ಲು ಹಿಡಿದು ಮನೆಯ ಕೀಲಿ ಹಾಕಿ ಗಲಾಟೆ ಮಾಡಿದ್ದರು. ಲಕ್ಸರಿ ಗಾಡಿಗೆ ಕಲ್ಲು ತೂರಿದ್ದರು. ಮನೆಯಲ್ಲಿ ಮಲಗಿದ್ದಾಗ ಬಾಗಿಲ ಮುಂದೆ ಇದ್ದ ವಸ್ತುಗಳಿಗೆ ಬೆಂಕಿ ಹಚ್ಚಿ ಹೊಗೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದರು. ವಿಠಲನ ಮಗನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆಯಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸತೀಶ ಎಲ್.ಪಿ ಸಾಕ್ಷಾಧಾರಗಳು ರುಜುವಾತಾದ ಹಿನ್ನೆಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 2,37,500 ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್‌ಬಟನ್ ಪ್ರೆಸ್ ಮಾಡಿ)

error: Content is protected !!