ಶಾಸಕ ಎಂ.ಬಿ. ಪಾಟೀಲ ಧರ್ಮಪತ್ನಿಯ ಫೇಸ್ ಬುಕ್ ಹ್ಯಾಕ್, ಏನೆಲ್ಲಾ ರಾದ್ದಾಂತ ಆಗಿದೆ ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲರ ಧರ್ಮಪತ್ನಿಯ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಇಲ್ಲಸಲ್ಲದ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ.
ಎಂ.ಬಿ. ಪಾಟೀಲ ಅವರ ಧರ್ಮಪತ್ನಿ ಆಶಾರಾಣಿ ಪಾಟೀಲರ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದೆ. ಲಾಗಿನ್, ಪಾಸವರ್ಡ್ ಬದಲಿಸಿದರೂ ಅಪ್ ಲೋಡ್ ಮಾಡುವುದು ನಿಲ್ಲುತ್ತಿಲ್ಲ.
ಆಶಾ ಪಾಟೀಲರ ಆಪ್ತ ಸಹಾಯಕ ರವಿಶಂಕರ ಎನ್‌ಪಿಯ ಫೇಸ್‌ಬುಕ್ ಅಕೌಂಟ್‌ಗೆ ಆಶಾ ಪಾಟೀಲ ಪೇಜ್ ಆ್ಯಡ್ ಮಾಡಲಾಗಿತ್ತು. ಹ್ಯಾಕರ್ ಗಳು ಬಾಕ್ಸಿಂಗ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಅವರು ವಿಜಯಪುರ ಸಿಇಓ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.