ಕಾರಿಗೆ ಅಡ್ಡ ಬಂದ ಕುದುರೆ ಖಲಾಸ್, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ಪಲ್ಟಿ, ಕಾರ್ ನಲ್ಲಿದ್ದ ಅಧಿಕಾರಿಗೆ ಏನಾಯಿತು?
ಸರಕಾರ್ ನ್ಯೂಸ್ ನಿಡಗುಂದಿ
ಚಲಿಸುತ್ತಿದ್ದ ಕಾರ್ ಗೆ ಕುದುರೆ ಅಡ್ಡ ಬಂದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಕುದುರೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರೆ, ಕಾರ್ ಪಲ್ಟಿಯಾಗಿದೆ.
ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ- 50 ರಲ್ಲಿ ಸೋಮವಾರ ಈ ಘಟನೆ ನಡೆದಿದೆ.
KA 28 P 5616 ನಂಬರಿನ ಕಾರ್ ಕುದುರೆಗೆ ಗುದ್ದಿದ್ದು, ಇದರ ಬೆನ್ನ ಹಿಂದೆ ಇದ್ದ ಬಸ್ ಕಾರ್ ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರ್ ಪಲ್ಟಿಯಾಗಿದೆ.
ಕಾರಿನಲ್ಲಿದ್ದ ಕೃಷಿ ಆಧಿಕಾರಿ ಎನ್. ಟಿ. ಗೌಡರಗೆ ಗಾಯವಾಗಿದೆ. ಇವರು ನಿಡಗುಂದಿ ತಾಲೂಕಾ ಕೃಷಿ ಇಲಾಖೆಯಲ್ಲಿ ಸೇವೆ ಮಾಡುತ್ತಿದ್ದಾರೆನ್ನಲಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು ಜೀವಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.