ಮಧ್ಯರಾತ್ರಿ ಅಕ್ರಮವಾಗಿ ಗೋವುಗಳ ಸಾಗಾಟ, ಬಾಯಿಗೆ ಪ್ಲಾಸ್ಟಿಕ್ ಟೇಪ್ ಅಂಟಿಸಿದ ಕಿರಾತಕರು, ಅಬ್ಬಬ್ಬಾ….ಇದೆಂಥಾ ಅಮಾನವೀಯ…!!!
ಸರಕಾರ ನ್ಯೂಸ್ ವಿಜಯಪುರ
ಮಧ್ಯರಾತ್ರಿ ಗೋವುಗಳನ್ನು ಹಿಡಿದು ಬಾಯಿಗೆ ಪ್ಲಾಸ್ಟಿಕ್ ಟೇಪ್ ಅಂಟಿಸಿ, ಕೈ-ಕಾಲುಗಳಿಗೆ ಹಗ್ಗ ಕಟ್ಟಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಪ್ರಕರಣ ಭೀಮಾತೀರದಲ್ಲಿ ಬೆಳಕಿಗೆ ಬಂದಿದೆ !
ಹೌದು, ಇಂಡಿ ತಾಲೂಕಿನ ಹಿರೇಬೇನೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಗ್ರಾಮಸ್ಥರ ಕಾಳಜಿಯ ಫಲವಾಗಿ ಗೋವುಗಳು ಬಚಾವ್ ಆಗಿವೆ. ಗೋವು ಕಳ್ಳರು ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ನೆರೆಯ ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಬುಲೆರೋ ಪಿಕ್ ಅಪ್ ವಾಹನಗಳಲ್ಲಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. 110 ಕ್ಕೂ ಹೆಚ್ಚು ಆಕಳು ಹಾಗೂ ಕರುಗಳನ್ನು ರಕ್ಷಿಸಲಾಗಿದೆ. ಮೂರು ವಾಹನಗಳಲ್ಲಿ ಒಂದರ ಮೇಲೊಂದರಂತೆ ಆಕಳು ಹಾಗೂ ಕರುಗಳನ್ನು ಹಾಕಿದ್ದರು. ಗ್ರಾಮಸ್ಥರು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂಡಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)