Uncategorized

ಎನ್‌ಟಿಪಿಸಿ ಹಾರು ಬೂದಿ ಅವಾಂತರ, 51 ರೈತರ ಜಮೀನು ಸವುಳು-ಜವುಳು !

ವಿಜಯಪುರ: ಎನ್‌ಟಿಪಿಸಿ ಹಾರು ಬೂದಿ ಕೆರೆಯಿಂದ 51 ರೈತರ 370 ಎಕರೆ ಜಮೀನು ಸವುಳು-ಜವುಳು ಉಂಟಾಗಿದೆ !
ನಿಜ, ಇಂಥದ್ದೊಂದು ಮಾಹಿತಿ ಅಧಿಕಾರಿಗಳ ತನಿಖೆಯಿಂದ ಹೊರಬಿದ್ದಿದೆ. ಕೂಡಗಿ ಎನ್‌ಟಿಪಿಸಿಯ ಹಾರು ಬೂದಿ ಮಿಶ್ರಿತ ಕೆರೆಯಿಂದ ಸುತ್ತಲಿನ ಜಮೀನುಗಳಲ್ಲಿ ಬೆಳೆಗಳಿಗೆ ಹಾನಿಯುಂಟಾಗುತ್ತಿದೆ. ಈ ಬಗ್ಗೆ ತನಿಖೆಗಾಗಿ ರೈತರು ಪ್ರತಿಭಟನೆ ನಡೆಸಿದ್ದರು. ಆ ಪ್ರಕಾರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತನಿಖಾ ತಂಡ ರಚಿಸಿದ್ದರು. ಇದೀಗ ತಂಡ ವರದಿ ಸಲ್ಲಿಸಿದ್ದು ಜಮೀನು ಸವುಳು ಜವುಳು ಉಂಟಾದ ಬಗ್ಗೆ ಮಾಹಿತಿ ಸಲ್ಲಿಸಿದ್ದಾರೆ.
ಅಲ್ಲದೇ, ಬೆಳೆ ಹಾನಿ ತಡೆಗೆ ತನಿಖಾ ತಂಡ ಸಲಹೆ ನೀಡಿದ್ದು ಆ ಪ್ರಕಾರ ‘1000 ಮೈಕ್ರೋನ್ಸ್ ಥಿಕ್ಸ್ ಸ್ಟೆಬಿಲೈಜ್ಡ್ ಹೆಚ್‌ಡಿಪಿಇ ಲೈನಿಂಗ್ ಮೆಟರಿಯಲ್’ ಹಾರು ಬೂದಿ ಮಿಶ್ರಿತ ನೀರಿನ ಕೆರೆಗೆ ಅಳವಡಿಸಿ ನೀರು ಬಸಿದು ಹೋಗದಂತೆ ತಡೆಗಟ್ಟಲು, ನೈಸರ್ಗಿಕ ನಾಲೆಗಳನ್ನು ಈಗಿರುವ ಮಟ್ಟಕ್ಕಿಂತ ಕೆಳಗೆ ಇಳಿಸುವುದು, ಪರಿಣಾಮಿತ ಜಮೀನನ್ನು ಎನ್‌ಟಿಪಿಸಿ ಕೂಡಗಿ ಇವರು ಭೂಸ್ವಾಧೀನ ಪಡಿಸಿಕೊಳ್ಳುವುದು ಹಾಗೂ ಇದಕ್ಕೆ ಪೂರಕವಾಗಿ ಎನ್‌ಟಿಪಿಸಿ ಅಧಿಕಾರಿಗಳು ತಮ್ಮ ಮೇಲ್ಪಟ್ಟದ ಸಮಿತಿ ಇವರೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜಮೀನುಗಳಲ್ಲಿ ಬಸಿ ನೀರನ್ನು ತಡೆಗಟ್ಟುವ ಸಾಧ್ಯತೆಗಳ ಬಗ್ಗೆ ಚರ್ಚಿಸಬೇಕೆಂದು ತಿಳಿಸಲಾಗಿದೆ.
ಮುಂದುವರಿದು ಸವುಳು-ಜವುಳು ಉಂಟಾದ ಜಮೀನಿನ ವಿವರ ಕಲೆ ಹಾಕಲು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

error: Content is protected !!