Uncategorized

ಕಾವಲುಗಾರನಿಂದಲೇ ಬ್ಯಾಂಕ್ ದರೋಡೆಗೆ ಯತ್ನ, ಭೀಮಾತೀರದಲ್ಲೊಂದು ಇಂಟ್ರೆಸ್ಟಿಂಗ್ ಕಹಾನಿ !!

ಸರಕಾರ ನ್ಯೂಸ್ ಇಂಡಿ

ಕಾವಲುಗಾರನೇ ಬ್ಯಾಂಕ್ ದರೋಡೆಗೆ ಯತ್ನಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ !

ಇಂಡಿ ಪಟ್ಟಣದ ಡಿಸಿಸಿ ಬ್ಯಾಂಕ್‌ನಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಬ್ಯಾಂಕ್‌ನ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಗರ ಲಾಳಸಂಗಿಯೇ ಈ ಕೃತ್ಯ ಎಸಗಿದ್ದು ಕಾರ್ಯ ಕೈಗೂಡದ ಹಿನ್ನೆಲೆ ಪರಾರಿಯಾಗಿದ್ದಾನೆ.

ಪತ್ನಿಯ ಕೊಲೆಗೆ ಪ್ರಯತ್ನ; ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ

ಈತ ತನ್ನ ದ್ವಿಚಕ್ರ ವಾಹನ ಕೆಎ 28 ಇಝಡ್ 4351 ಹೋಂಡಾ ಕಂಪನಿಯ ವಾಹನದಲ್ಲಿ ಕಬ್ಬಿಣ ಕಟ್ ಮಾಡುವ ಗ್ರೈಂಡರ್ ಯಂತ್ರ, ಸುತ್ತಿಗೆ, ಕತ್ತರಿ ಮತ್ತಿತರ ಸಾಮಗ್ರಿ ತೆಗೆದುಕೊಂಡು ಬಂದು ಬ್ಯಾಂಕ್ ಎಟಿಎಂ ಮೇಲ್ಭಾಗದ ಬಾಗಿಲು ತೆರೆದು ಲಾಕರ್ ಕಟ್ ಮಾಡಲು ಯತ್ನಿಸಿದ್ದಾನೆ. ಲಾಕರ್ ಕಟ್ ಆಗದ ಕಾರಣ ಭಯಗೊಂಡು ಪರಾರಿಯಾಗಿದ್ದಾನೆ.

ತಾನು ತಂದ ವಾಹನ ಕೂಡ ಬ್ಯಾಂಕ್‌ನ ತಡೆಗೋಡೆಯೊಳಗೆ ಇಟ್ಟು ಪರಾರಿಯಾಗಿದ್ದಾನೆ. ಬ್ಯಾಂಕಿನ ವ್ಯವಸ್ಥಾಪಕ ಈರಣ್ಣ ತೆಲ್ಲೂರ ಇಂಡಿ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

(ಕ್ಷಣ‌ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!