ದೇವರಿಗೆ ಹೊರಟಿದ್ದ ಟಾಟಾ ಏಸ್ ಪಲ್ಟಿಯಾಗಿ ಭಾರಿ ಅನಾಹುತ!!! ಎಷ್ಟು ಜನರಿದ್ದರು? ಏನಾಯ್ತು?
ಸರಕಾರ ನ್ಯೂಸ್ ಸಿಂದಗಿ
ಜವಳ ಕಾರ್ಯಕ್ರಮಕ್ಕೆಂದು ಘತ್ತರಗಿ ಬಾಗಮ್ಮ ದೇವಿಗೆ ಹೊರಟಿದ್ದ ಟಾಟಾ ಏಸ್ ಪಲ್ಟಿಯಾಗಿದೆ.
ಸಿಂದಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಲೋಯಲಾ ಶಾಲೆಯ ಹತ್ತಿರ ಗುರುವಾರ ನಸುಕಿನ ಜಾವ 4 ರ ಸುಮಾರಿಗೆ ಈ ಘಟನೆ ನಡೆದಿದೆ.
ಹುನುಗುಂದ ತಾಲೂಕಿನ ಬೇವಿನಾಳ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 5೦ರ ಮಾರ್ಗವಾಗಿ ಅಫಜಲಪೂರ ತಾಲೂಕಿನ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ಜಾವಳ ಕಾರ್ಯಕ್ರಮಕ್ಕೆ ಹೊರಟಿದ್ದ ವೇಳೆ ಈ ಅಪಘಾತ ನಡೆದಿದೆ.
ವಾಹನದಲ್ಲಿದ್ದ 19 ಜನರಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಘಟನೆಯಲ್ಲಿ ಲಕ್ಷ್ಮೀ ಶೇಗುಣಸಿ, ದ್ರಾಕ್ಷಾಯಿಣಿ ಹಿರೇಮಠ, ಅನುರಾಧಾ ಮೇಟಿ, ನೀಲವ್ವ ಮೇಟಿ ಸೇರಿದಂತೆ 15ಜನ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಮತ್ತು ವೃದ್ಧರು ಸೇರಿದ್ದಾರೆ.
ಗಾಯಾಳುಗಳನ್ನು ವೈದ್ಯಕೀಯ ಉಪಚಾರಕ್ಕಾಗಿ ಸಿಂದಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿಮ ಅದಕ್ಕಾಗಿ ಪಕ್ಕದಲ್ಕಿರುವ ಬೆಲ್ ಬಟನ್ ಪ್ರೆಸ್ ಮಾಡಿ)