Uncategorized

ಆಲಮಟ್ಟಿ ಜಲಾಶಯದಲ್ಲಿ ಬೋಟಿಂಗ್‌, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ, ಯೋಜನೆ ವಿವರ ಬಿಚ್ಚಿಟ್ಟ ಸಚಿವ ಅಂಗಾರ

ಆಲಮಟ್ಟಿ: ಅವಿಭಜಿತ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಆಲಮಟ್ಟಿ ಜಲಾಶಯದಲ್ಲಿ ಒಳನಾಡು ಜಲಸಾರಿಗೆಯಿಂದ ಪ್ರವಾಸಿಗರ ಆಕರ್ಷಣೆಗಾಗಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲು ಸರ್ಕಾರ ಆಸಕ್ತಿ ಹೊಂದಿದೆ.

ಈಗಾಗಲೇ ಯೋಜನೆ ರೂಪಗೊಂಡಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆಲಮಟ್ಟಿಯಿಂದ ಬಾಗಲಕೋಟೆ ಜಲಮಾರ್ಗದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಎರಡೂ ಬದಿಯಲ್ಲಿ 3.90 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಫ್ಲೊಟಿಂಗ್‌ ಜೆಟ್‌ ನಿರ್ಮಾಣ ಮಾಡಲು, ಎರಡೂ ಬದಿಗಳಲ್ಲಿ 4.83 ಕೋಟಿ ರೂ.ವೆಚ್ಚದಲ್ಲಿ ಟರ್ಮಿನಲ್‌ ಅಭಿವೃದ್ಧಿ ಪಡಿಸಲು ಹಾಗೂ 4.56 ಕೋಟಿ ರೂ.ವೆಚ್ಚದಲ್ಲಿ ಹೂಳೆತ್ತಲು ಯೋಜನೆ ರೂಪಿಸಲಾಗಿದೆ.

ಮುಂದುವರಿದು 0.40 ಕೋಟಿ ವೆಚ್ಚದಲ್ಲಿ ನೇವಿಗೇಷ್ನಲ್‌ ಉಪಕರಣಗಳನ್ನು ಪ್ರವಾಸಿಗರ ಬೋಟ್‌ ಗಳ ಸುಗಮ ಹಾಗೂ ಸುರಕ್ಷಿತ ಚಲನವಲನಕ್ಕೆ ಅಳವಡಿಸಲು ಒಟ್ಟು 13.63 ಕೋಟಿ ಅಂದಾಜು ಮೊತ್ತದ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗಿದೆ.

ಇದನ್ನು ಕೇಂದ್ರ ಸರ್ಕಾರದ ನೌಕಾಯಾನ ಮಂತ್ರಾಲಯದಡಿ ಬರುವ ಸಾಗರಮಾಲಾ ಕೋಶಕ್ಕೆ ಮತ್ತು ಭಾರತೀಯ ರಾಷ್ಟ್ರೀಯ ಜಲಮಾರ್ಗಗಳ ಪ್ರಾಧಿಕಾರ, ನೋಯ್ಡಾ, ಉತ್ತರ ಪ್ರದೇಶ ಈ ಸಂಸ್ಥೆಗೆ ಧನ ಸಹಾಯ ಕೋರಿ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಮೀನುಗಾರಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್‌. ಅಂಗಾರ ಸದನದಲ್ಲಿ ತಿಳಿಸಿದ್ದಾರೆ.

error: Content is protected !!